ಡಿ.15 ರಿಂದ ಸೇನಾ ನೇಮಕಾತಿ ರ‍್ಯಾಲಿ

November 19, 2020

ಮಡಿಕೇರಿ ನ.19 : ಸೇನಾ ನೇಮಕಾತಿ ಕಚೇರಿ, ಕೇಂದ್ರ ಸ್ಥಾನ ನೇಮಕಾತಿ ವಲಯ, ಬೆಂಗಳೂರು ಇವರು ಡಿಸೆಂಬರ್, 15 ರಿಂದ 23 ರವರೆಗೆ ಬೆಂಗಳೂರು ನಗರದ ಜಯನಗರ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಭಾರತೀಯ ಸೇನೆಗೆ ಭರ್ತಿ ಮಾಡಲಿದ್ದಾರೆ. ಈ ಜಾಲತಾಣದಲ್ಲಿ ನೋಂದಾಯಿಸಿದ ಅರ್ಹ ಅಭ್ಯರ್ಥಿಗಳು ಕೋವಿಡ್-19 ಪ್ರಮಾಣ ಪತ್ರವನ್ನು ರ್ಯಾಲಿ ಪ್ರಾರಂಭದ 48 ಗಂಟೆಗಳ ಒಳಗೆ ಪಡೆದುಕೊಂಡು ಮಾಸ್ಕ್ ಮತ್ತು ಗ್ಲೌಸ್‍ಗಳನ್ನು ಧರಿಸಿಕೊಂಡು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಅವರು ತಿಳಿಸಿದ್ದಾರೆ.

error: Content is protected !!