ನ.24 ರಂದು ಕೊಡಗರಹಳ್ಳಿ ವಾರ್ಡ್ ಸಭೆ

19/11/2020

ಮಡಿಕೇರಿ ನ.19 : ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ 2020-21 ನೇ ಸಾಲಿನ ವಾರ್ಡ್ ಸಭೆಯು ನವೆಂಬರ್, 24 ರಂದು ಬೆಳಗ್ಗೆ 10.30 ಗಂಟೆಗೆ ವಾರ್ಡ್-2 ಅಂದಗೋವೆ, ಕಲ್ಲುಕೋರೆ, ಬೆಳಗ್ಗೆ 11.30 ಗಂಟೆಗೆ ವಾರ್ಡ್-1 ಕಲ್ಲೂರು, ಅಂದಗೋವೆ ಪೈಸಾರಿ ಇವರಿಗೆ ಕಲ್ಲೂರು ಅಂಗನವಾಡಿ, ಮಧ್ಯಾಹ್ನ 2 ಗಂಟೆಗೆ ವಾರ್ಡ್-4 ಕೊಡಗರಹಳ್ಳಿ ಕಾವೇರಿ ಬಡಾವಣೆ, ಕೊಡರಗರಹಳ್ಳಿ ಸರ್ಕಲ್ ಕೊಡಗರಹಳ್ಳಿ ಪಂಚಾಯಿತಿ ಕಚೇರಿ, ಮಧ್ಯಾಹ್ನ 3 ಗಂಟೆಗೆ ವಾರ್ಡ್-3 ಕೊಡಗರಹಳ್ಳಿ ಸ್ಕೂಲ್ ಬಾಣೆ ಮತ್ತು ಉಪ್ಪುತೋಡು ಕೊಡಗರಹಳ್ಳಿ ಪಂಚಾಯಿತಿ ಕಚೇರಿಯಲ್ಲಿ ನಡೆಯಲಿದೆ ಎಂದು ಕೊಡಗರಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವರು ತಿಳಿಸಿದ್ದಾರೆ.