ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಸಾಲ ಹಾಗೂ ಸಹಾಯಧನಕ್ಕೆ ಅರ್ಜಿ ಆಹ್ವಾನ

November 19, 2020

ಮಡಿಕೇರಿ ನ.19 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) ಕೊಡಗು ಇವರ ವತಿಯಿಂದ 2020-21ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ಈ ಕೆಳಕಂಡ ವಿವಿಧ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ನೀಡಲು ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಸ್ವಯಂ ಹಾಗೂ ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಲ್ಲಿ ರೂ. 1 ಲಕ್ಷಕ್ಕೆ ಶೇ.50 ಸಹಾಯಧನ ಹಾಗೂ ಶೇ.50 ರಷ್ಟು ಸಾಲ ಸೌಲಭ್ಯವನ್ನು ನಿಗಮದಿಂದ ನೇರವಾಗಿ ನೀಡಲಾಗುವುದು.
ಗಂಗಾ ಕಲ್ಯಾಣ ನೀರಾವರಿ ಯೋಜನೆ: ಈ ಯೋಜನೆಯಡಿಯಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಉಚಿತವಾಗಿ ರೂ. 2 ಲಕ್ಷಗಳ ವೆಚ್ಚದಲ್ಲಿ ನಿಗಮದ ವತಿಯಿಂದ ಕೊಳವೆ ಬಾವಿ ಕೊರೆಸಿಕೊಡಲಾಗುವುದು.
ಶ್ರಮಶಕ್ತಿ ಯೋಜನೆ: ಈ ಯೋಜನೆಯಡಿ ಕುಲ ಕಸುಬುಗಳನ್ನು ಕೈಗೊಳ್ಳುಲು ನಿಗಮದಿಂದ ರೂ. 25,000/- ಹಾಗೂ 50,000/- ಗಳಿಗೆ ಶೇ.50 ರಷ್ಟು ಸಾಲ ಶೇ.4 ರ ಬಡ್ಡಿ ದರದಲ್ಲಿ ಹಾಗೂ ಶೇ. 50 ರಷ್ಟು ಸಹಾಯಧನವನ್ನು ಕಲ್ಪಿಸಲಾಗುತ್ತದೆ.
ಮೈಕ್ರೋ ಕ್ರಿಡಿಟ್ ಯೋಜನೆ (ಸ್ವ-ಸಹಾಯ ಗುಂಪುಗಳಿಗೆ): ಸ್ವ-ಸಹಾಯ ಸಂಘದ ಸದಸ್ಯರಿಗೆ ರೂ. 10,000 ಗಳನ್ನು ಇದರಲ್ಲಿ, ರೂ. 5,000 ಸಾಲ ಹಾಗೂ ರೂ. 5,000 ಸಹಾಯಧನವಾಗಿರುತ್ತದೆ.
ಪಶು ಸಂಗೋಪನಾ ಯೋಜನೆ: (ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮಾತ್ರ) ಈ ಯೋಜನೆಯಡಿ ಹಸು, ಕೋಳಿ, ಕುರಿ, ಎಮ್ಮೆ ಮುಂತಾದ ಹೈನುಗಾರಿಕೆ ಪ್ರಾಣಿಗಳನ್ನು ಖರೀದಿಸಲು ನಿಗಮದಿಂದ ರೂ. 40,000 ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯಧನವನ್ನು ನೇರವಾಗಿ ನೀಡಲಾಗುತ್ತದೆ.
ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆ: ರೂ. 1 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಹಾಗೂ ಸಹಾಯಧನವನ್ನು ನೀಡಲಾಗುವುದು. ರೂ. 50,000 ಸಾಲ ಶೇ.3ರ ಬಡ್ಡಿ ದರದಲ್ಲಿ ಹಾಗೂ ರೂ. 50,000 ಸಹಾಯಧನವಾಗಿರುತ್ತದೆ. (ಸಣ್ಣ ಟ್ರ್ಯಾಕ್ಟರ್, ಪವರ್‍ಟಿಲ್ಲರ್, ಭೂಮಿ ಸಿದ್ದತೆ ಉಪಕರಣ, ನಾಟಿ ಬಿತ್ತನೆ ಉಪಕರಣ, ಅಂತರ ಬೇಸಾಯ ಉಪಕರಣಗಳು ಇತ್ಯಾದಿಗಳನ್ನು ರೈತರು ಖರೀದಿಸಲು)
ಅಲ್ಪಸಂಖ್ಯಾತರ ಟ್ಯಾಕ್ಸಿ ಕಲ್ಯಾಣ ಯೋಜನೆ: ಈ ಯೋಜನೆಯನ್ನು ಬ್ಯಾಂಕ್ ಸಹಯೋಗದಿಂದ ಅನುಷ್ಠಾನಗೊಳಿಸಲು ರೂ. 75,000 ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಸಲು ವಾಹನ ಮೌಲ್ಯ ಕನಿಷ್ಠ ರೂ. 4 ಲಕ್ಷಗಳಿಂದ 7.50 ಲಕ್ಷಗಳಾಗಿರತಕ್ಕದ್ದು.
ಗೃಹ ನಿರ್ಮಾಣ ಮೇಲಿನ ಮಾರ್ಜಿನ್ ಹಣ ಸಾಲ ಯೋಜನೆ: ಈ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಗೃಹ ನಿರ್ಮಾಣ ಸಂಸ್ಥೆಗಳ ಮೂಲಕ ವಿವಿಧ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ಫಲಾನುಭವಿ ವಂತಿಕೆ ಪಾವತಿಸುವ ಸಲುವಾಗಿ ನಿಗಮದ ವತಿಯಿಂದ ಗೃಹ ನಿರ್ಮಾಣ ಸಂಸ್ಥೆಗಳಿಗೆ ಶೇ. 4ರ ಬಡ್ಡಿದರದಲ್ಲಿ ಗರಿಷ್ಠ ರೂ. 1 ಲಕ್ಷದವರೆಗೆ ಮಾರ್ಜಿನ್ ಹಣ ಸಾಲ ಸೌಲಭ್ಯ ಒದಗಿಸಲಾಗುವುದು.
ಆಟೋಮೊಬೈಲ್ ಸರ್ವೀಸ್ ತರಭೇತಿ ಹಾಗೂ ಸಾಲ ಯೋಜನೆ: ಈ ಯೋಜನೆಯಲ್ಲಿ ಆಟೋಮೊಬೈಲ್ ಟ್ರೇಡ್‍ನಲ್ಲಿ ತರಭೇತಿ ಪಡೆದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಬ್ಯಾಂಕ್ ಸಹಯೋಗದೊಂದಿಗೆ ರೂ. 2 ಲಕ್ಷದಿಂದ ರೂ. 5.00 ಲಕ್ಷದವರೆವಿಗೂ ಸಾಲ ಹಾಗೂ ಸಹಾಯಧನವನ್ನು ನೀಡಲಾಗುವುದು. ನಿಗಮದಿಂದ 1.25 ಲಕ್ಷ ಗರಿಷ್ಠ ಸಹಾಯಧನ ನೀಡಲಾಗುವುದು.. ಫಲಾಪೇಕ್ಷಿಯ ವಯಸ್ಸು 18 ರಿಂದ 45 ವರ್ಷಗಳಾಗಿರತಕ್ಕದ್ದು.
ಮೈಕ್ರೋ ಸಾಲ ಯೋಜನೆ (ವೈಯಕ್ತಿಕ) ಮಹಿಳೆಯರಿಗೆ ಮಾತ್ರ: ಕೋವಿಡ್19 ಪಿಡುಗಿನಿಂದಾಗಿ ತೊಂದರೆಗೊಳಗಾದ ಹಾಗೂ ನಿಗಮದ ಯಾವುದೇ ಯೋಜನೆಯಲ್ಲೂ ಇದುವರೆಗೆ ಸಾಲ, ಸಹಾಯಧನ ಪಡೆಯದೆ ಕಡು ಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವಯೋ ಮಾನದೊಳಗಿನ ಮಹಿಳೆಯರಿಗೆ ವಿವಿಧ ಉದ್ದೇಶಗಳನ್ನು ಕೈಗೊಳ್ಳಲು ದುಡಿಮೆ ಬಂಡವಾಳಕ್ಕಾಗಿ ರೂ. 10,000 ಮೊತ್ತವನ್ನು ನಿಗಮದಿಂದ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಸಾಲ ಹಾಗೂ ಸಹಾಯಧನದ ಕಲ್ಪಿಸಲಾಗುವುದು. ಇದು 2020-21ನೇ ಸಾಲಿಗೆ ಮಾತ್ರ ಅನ್ವಯವಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು: ಅರ್ಜಿ ಸಲ್ಲಿಸಲು 18 ರಿಂದ ಮೇಲ್ಪಟ್ಟು 45 ಹಾಗೂ 55 ವರ್ಷದೊಳಗೆ ವಯೋಮಿತಿಯಿರಬೇಕು. ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರುವವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ. ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ಆಧಾರ್‍ಕಾರ್ಡ್‍ನ್ನು ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. ಈಗಾಗಲೇ ಸಾಲ ಮನ್ನಾ ಆಗಿರುವ ಫಲಾನುಭವಿಗಳಿಗೆ ಹೊಸದಾಗಿ ಸಾಲ ನೀಡಲಾಗುವುದಿಲ್ಲ. ಫಲಾನುಭವಿಯು ರಾಜ್ಯದ ಮತೀಯ ಅಲ್ಪಸಂಖ್ಯಾತರಾಗಿದ್ದು, ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81,000 ಮತ್ತು ನಗರ ಪ್ರದೇಶದವರಿಗೆ ರೂ.1,03,000 ಗಳ ಒಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಮೌಲಾನಾ ಅಜಾದ್ ಭವನ, ಗ್ರಾಮಾಂತರ ಪೋಲೀಸ್ ಠಾಣೆ ಹತ್ತಿರ, ಕಾಲೇಜು ರಸ್ತೆ, ಮಡಿಕೇರಿ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಈ ಯೋಜನೆಗಳನ್ನು ಆನ್‍ಲೈನ್‍ನಲ್ಲಿ ನೋಂದಣಿ ಮಾಡಲು ಡಿಸೆಂಬರ್ 10 ಕೊನೆಯ ದಿನವಾಗಿರುತ್ತದೆ. ಆನ್‍ಲೈನ್‍ನಲ್ಲಿ ಭರ್ತಿಯಾದ ಅರ್ಜಿಗಳನ್ನು ಪ್ರಿಂಟೌಟ್ Print out)ತೆಗೆದು ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾ ಕಛೇರಿಗೆ ಸಲ್ಲಿಸಲು ಕಡೆಯ ದಿನಾಂಕ: ಡಿಸೆಂಬರ್ 21 ಆಗಿರುತ್ತದೆ. ಕಛೇರಿ ದೂರವಾಣಿ ಸಂಖ್ಯೆ: 08272-220449.
ವೆಬ್‍ಸೈಟ್ ವಿವರ: www.kmdc.kar.nic.in/loan/login.aspxಆಗಿದೆ. ಮೈಕ್ರೋ ಸಾಲ ಯೋಜನೆಗೆ ವೆಬ್‍ಸೈಟ್ ವಿಳಾಸ (ವೈಯಕ್ತಿಕ) (ಮಹಿಳೆಯರಿಗೆ ಮಾತ್ರ) kmdcmicro.karnataka.gov

error: Content is protected !!