ಕುಶಾಲನಗರ ನೂತನ ತಾಲ್ಲೂಕು ರಚನೆಗೆ ಅಧಿಕೃತ ಅಧಿಸೂಚನೆ ಘೋಷಿಸಿದ ಸರ್ಕಾರ

19/11/2020

ಮಡಿಕೇರಿ ನ.19 : ಕುಶಾಲನಗರ ಹೊಸ ತಾಲೂಕು ರಚನೆ ಪ್ರಕ್ರಿಯೆಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದು ನೂತನ ತಾಲ್ಲೂಕಿನ ಗಡಿ ಗುರುತು ಮತ್ತು ಗ್ರಾಮಗಳ ವಿವರಗಳ ಪ್ರಕಟಣೆಯ ಅಧಿಕೃತ ಘೋಷಣೆ ಹೊರಡಿಸಿದೆ.
ಅಧಿಸೂಚನೆಯಲ್ಲಿ ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳುವ ಹೋಬಳಿ ಮತ್ತು ಗ್ರಾಮಗಳ ವಿವರಗಳನ್ನು ಹಾಗೂ ಮೂಲ ತಾಲೂಕಿನಲ್ಲಿ ಉಳಿಯುವ ಹೋಬಳಿ ಮತ್ತು ಗ್ರಾಮಗಳ ವಿವರಗಳನ್ನು ನೀಡಲಾಗಿದೆ.
ನೂತನ ತಾಲೂಕಿಗೆ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಗಳಿಗೆ ಗ್ರಾಮಗಳನ್ನು ವಿಂಗಡಿಸಲಾಗಿದ್ದು ಮುಳ್ಳುಸೋಗೆ, ಬಸವನಹಳ್ಳಿ, ಬೈಚನಹಳ್ಳಿ ಗ್ರಾಮಗಳನ್ನು ಮುಳ್ಳುಸೋಗೆ ಗ್ರಾಮ ಲೆಕ್ಕಿಗರ ವ್ಯಾಪ್ತಿಗೆ ಒಳಪಡಿಸಿದರೆ ಕೂಡಿಗೆ ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು ಗ್ರಾಪಂ ಯ ಹಳ್ಳಿಗಳನ್ನು, ನಂಜರಾಯಪಟ್ಟಣ, ರಂಗಸಮುದ್ರ, ವಾಲ್ನೂರು ತ್ಯಾಗತ್ತೂರು, ರಸೂಲ್‍ಪುರ, ಅಭ್ಯತ್‍ಮಂಗಲ ವ್ಯಾಪ್ತಿಗೆ ಅಭ್ಯತ್‍ಮಂಗಲ, ಕೂಡ್ಲೂರು ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಹೆಬ್ಬಾಲೆ ವ್ಯಾಪ್ತಿಗೆ ಹೆಬ್ಬಾಲೆ, ಮರೂರು, ಹುಲುಸೆ, ಶಿರಂಗಾಲ ಗ್ರಾಮ ವ್ಯಾಪ್ತಿಗೆ ಶಿರಂಗಾಲ, ಮಣಜೂರು, ತೊರೆನೂರು ವೃತ್ತದ ವ್ಯಾಪ್ತಿಯ ತೊರೆನೂರು, ಚಿಕ್ಕಳುವಾರ, ದೊಡ್ಡಳುವಾರ, ಅರಿಸಿನಗುಪ್ಪೆ, ಅಳಿಲುಗುಪ್ಪೆ, ಬಸರಿಗುಪ್ಪೆ, ಅಂದಾನಿಪುರ, ಗದ್ದೆಹೊಸಳ್ಳಿ ಸೇರಿದ್ದು ಸುಂಟಿಕೊಪ್ಪ ಹೋಬಳಿಯ ಉಲುಗುಲಿ ವ್ಯಾಪ್ತಿಗೆ ಉಲುಗುಲಿಯ ನಾರ್ಗಣೆ, ಸುಂಟಿಕೊಪ್ಪ ಪಟ್ಟಣ, ಕೆದಕಲ್ ವೃತ್ತಕ್ಕೆ ಕೆದಕಲ್, ಹಾಲೇರಿ, ಹೊರೂರು, ಮೋದೂರು, ಕೊಡಗರಹಳ್ಳಿ ವ್ಯಾಪ್ತಿಗೆ ಅಂದಗೋವೆ, ಕೊಡಗರಹಳ್ಳಿ, ಕಾನ್‍ಬೈಲ್, ಬೈಚನಹಳ್ಳಿ, ಹೇರೂರು, ಹಾದ್ರೆ, ಮುಳ್ಳೂರು, ಕಂಬಿಬಾಣೆ ಗ್ರಾಮದ ವೃತ್ತಕ್ಕೆ 7ನೇ ಹೊಸಕೋಟೆ, ಅತ್ತೂರು ನಲ್ಲೂರು, ನಾಕೂರು ಶಿರಂಗಾಲ ವ್ಯಾಪ್ತಿಯ ಪ್ರದೇಶಗಳು ಹಾಗೂ ಚೇರಳ ಶಿರಂಗಾಲ ವ್ಯಾಪ್ತಿಗೆ ಚೇರಳ ಶಿರಂಗಾಲ ಸೇರಿದಂತೆ ಚೇರಳ, ಶ್ರೀಮಂಗಲ, ಈರಳವಳಮುಡಿ ಕಾಂಡನಕೊಲ್ಲಿ ವ್ಯಾಪ್ತಿಯ ಕಾಂಡನಕೊಲ್ಲಿ, ಕೊಪ್ಪತ್ತೂರು, ಕಡಗದಾಳು ಗ್ರಾಮಗಳು ನೂತನ ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳಲಿವೆ.