ಉನ್ನತ ಮಟ್ಟದ ತಾಂತ್ರಿಕತೆಗಳಲ್ಲಿ ಹೂಡಿಕೆ

November 20, 2020

ಬೆಂಗಳೂರು ನ.20 : ಕರ್ನಾಟಕ ರಾಜ್ಯವನ್ನು ಹೂಡಿಕೆಯಲ್ಲಿ ಅದರಲ್ಲೂ ಉನ್ನತ ಮಟ್ಟದ ತಾಂತ್ರಿಕತೆಗಳಲ್ಲಿ ಪ್ರಮುಖ ಆಕರ್ಷಣೀಯ ಹೂಡಿಕೆ ರಾಜ್ಯವನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ಇಂದು “ಬೆಂಗಳೂರು ಟೆಕ್ ಸಮ್ಮಿಟ್ 2020” ಭಾಗವಹಿಸಿ ಮಾತನಾಡಿ, 2025ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ನಷ್ಟು ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಲಿಷ್ಠ ದೇಶವನ್ನಾಗಿ ಪರಿವರ್ತಿಸಲು ಪ್ರಧಾನಿ ಮೋದಿ ತೀವ್ರ ಉತ್ಸುಕವಾಗಿದ್ದಾರೆ. ಭಾರತ ಸರ್ಕಾರದ ಈ ದೃಷ್ಟಿಕೋನದಲ್ಲಿ ಸಾಗಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
2019ರಲ್ಲಿ 7 ಯುನಿಕಾನ್ರ್ಸ್ ಸ್ಟಾರ್ಟ್ ಅಪ್ ಗಳಲ್ಲಿ 4(1 ಬಿಲಿಯನ್ ಡಾಲರ್ ಮೊತ್ತ) ಬೆಂಗಳೂರಿನದ್ದಾಗಿವೆ ಎಂದರು.

error: Content is protected !!