ಬೆಂಗಳೂರು-ಚೆನ್ನೈ ರೈಲು ಸ್ಥಗಿತ

November 20, 2020

ಬೆಂಗಳೂರು ನ.20: ಅತ್ಯಂತ ಹೆಚ್ಚು ಪ್ರಯಾಣಿಕರು ಇರುತ್ತಿದ್ದ ಬೆಂಗಳೂರು-ಚೆನ್ನೈ ನಡುವಣ ರೈಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕರು ಕಡಿಮೆಯಾಗಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಸೂಪರ್ ಫಾಸ್ಟ್ ವಿಶೇಷ ರೈಲನ್ನು ನ.21 ರಿಂದ ಸ್ಥಗಿತಗೊಳಿಸಲಾಗುತ್ತಿದೆ. ಅ.23 ರಿಂದ ಪ್ರಾರಂಭವಾದ ರೈಲು ನಂಬರ್ 02027/02028 ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳೂ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ಜನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ಕೆ.ವರ್ಮಾ ತಿಳಿಸಿದ್ದಾರೆ.
“ಕಳೆದ ಮೂರು-ನಾಲ್ಕು ದಿನಗಳಿಂದ ಕಡಿಮೆ ಜನರು ಸಂಚರಿಸುತ್ತಿದ್ದಾರೆ, ಈ ಕಾರಣದಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಎಕೆ ವರ್ಮಾ ಹೇಳಿದ್ದಾರೆ.