ಎಸ್‍ಎಂಕೆ ಮೊಮ್ಮಗ, ಡಿಕೆಶಿ ಪುತ್ರಿ ನಿಶ್ಚಿತಾರ್ಥ

November 20, 2020

ಬೆಂಗಳೂರು ನ.20 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗ, ಕೆಫೆ ಕಾಫಿ ಡೇ ಮಾಲಿಕ ದಿವಗಂತ ವಿ.ಜಿ.ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮತ್ರ್ಯ ಹೆಗ್ಡೆ ನಿಶ್ಚಿತಾರ್ಥ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಖಾಸಗಿ ಹೊಟೆಲ್ ನಲ್ಲಿ ನೆರವೇರಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಡಾ.ಕೆ.ಸುಧಾಕರ್, ಆರ್.ಅಶೋಕ್, ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಎರಡೂ ಕುಟುಂಬಗಳ ಆಪ್ತ ಬಂಧುಗಳು, ಸ್ನೇಹಿತರು ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ತಂದೆ ಸಿದ್ಧಾರ್ಥ್ ಹೆಗ್ಡೆ ನಿಧನದ ನಂತರ ಕಾಫಿ ಡೇ ಉದ್ಯಮವನ್ನು ಅಮತ್ರ್ಯ ಹೆಗ್ಡೆ ನೋಡಿಕೊಳ್ಳುತ್ತಿದ್ದು, ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ತಮ್ಮ ತಂದೆ ಸ್ಥಾಪಿಸಿರುವ ಎಂಜಿನಿಯರಿಂಗ್ ಕಾಲೇಜು ಗ್ಲೋಬಲ್ ಟೆಕ್ನಾಲಜಿ ಅಕಾಡೆಮಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

error: Content is protected !!