ಕೋವಿಡ್ ಹಿನ್ನೆಲೆ ಕುಶಾಲನಗರ ದನಗಳ ಜಾತ್ರೆ ರದ್ದು

20/11/2020

ಮಡಿಕೇರಿ ನ. 20 : ಕೋವಿಡ್ ಹಿನ್ನೆಲೆ ಕುಶಾಲನಗರ ಐತಿಹಾಸಿಕ ಗಣಪತಿ ದೇವಾಲಯದ ವಾರ್ಷಿಕ ಜಾತ್ರೆ ಸರಳ ರೀತಿಯಲ್ಲಿ ನಡೆಸಲಾಗುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ.
ಡಿ. 2 ರಿಂದ ಗಣಪತಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಡಿ. 4 ರಂದು ಕೋವಿಡ್ ಮಾರ್ಗಸೂಚಿಯಂತೆ ಮಹಾಗಣಪತಿ ರಥೋತ್ಸವ ನಡೆಯಲಿದೆ. ಅಲ್ಲದೇ ಜಾತ್ರೆ ಅಂಗವಾಗಿ ನಡೆಯುತ್ತಿದ್ದ 100ನೇ ವರ್ಷದ ಗೋಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ಜಾತ್ರಾ ಮೈದಾನದಲ್ಲಿ ಅಮ್ಯೂಸ್ ಮೆಂಟ್ ಸೇರಿದಂತೆ ಯಾವುದೇ ವ್ಯಾಪಾರ ವಹಿವಾಟಿಗೆ ಅನುಮತಿ ಇಲ್ಲ.