ವಿರಾಜಪೇಟೆಯಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್’ಗೆ ಚಾಲನೆ

20/11/2020

ವಿರಾಜಪೇಟೆ: ನ.20: ನೂತನವಾಗಿ ರಚನೆಯಾಗಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್’ಗೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಚಾಲನೆ ನೀಡಿದರು.
ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಮಾತಂಡ ಮೊಣ್ಣಪ್ಪ ವಿನಾ ಕಾರಣ ಯಾರೊಂದಿಗೂ ವಾಗ್ವಾದ ಬೇಡ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಉತ್ತಮ. ಆದರೆ ಸುಮ್ಮನೆ ನಮ್ಮ ಮೇಲೆ ಆಕ್ರಮಣ ನಡೆಸಿದರೆ ನೋಡಿಕೊಂಡಿರಲು ಸಾದ್ಯವಿಲ್ಲ ಎಂದರು.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ ಯೂತ್ ವಿಂಗ್ ಸದಸ್ಯತ್ವ ಅರ್ಜಿ ಬಿಡುಗಡೆ ಮಾಡಿದರು. ಅಲ್ಲದೆ ಯೂತ್ ವಿಂಗ್ ಸದಸ್ಯತ್ವ ಪಡೆದುಕೊಳ್ಳುವಂತೆ ಕೋರಿದರು.
ವೇದಿಕೆಯಲ್ಲಿ ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪೆÇ್ರಫೆಸರ್ ಇಟ್ಟಿರ ಬಿದ್ದಪ್ಪ ಕೊಡವ ಸಮಾಜ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ವೇದಿಕೆಯಲ್ಲಿದ್ದರು.
ಯೂತ್ ವಿಂಗ್ ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಅವರು ‘ಇನ್ವೆಸ್ಟಿಂಗ್ ಕೊಡಗು’ ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಯೂತ್ ವಿಂಗ್ ಸಲಹೆಗಾರ್ತಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಅಣ್ಣೀರ ಹರೀಶ್ ಮಾದಪ್ಪ ಸ್ವಾಗತಿಸಿದರೆ ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿ, ಖಜಾಂಚಿ ಚಿರಿಯಪಂಡ ವಿಶು ಕಾಳಪ್ಪ ವಂದಿಸಿದರು.