ಅಲ್ಪಸಂಖ್ಯಾತರ ಆನ್‍ಲೈನ್ ಕಂಪ್ಲೇಂಟ್ ಮ್ಯಾನೆಜ್‍ಮೆಂಟ್ ಪೊರ್ಟಲ್ ಆರಂಭ

20/11/2020

ಮಡಿಕೇರಿ ನ.20 : ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಿಂದ ಆನ್‍ಲೈನ್ ಕಂಪ್ಲೇಂಟ್ ಮ್ಯಾನೆಜ್‍ಮೆಂಟ್ ಪೊರ್ಟಲ್ www.ncm.nic.in ಪ್ರಾರಂಭಿಸಲಾಗಿದೆ. ಈ ಪೋರ್ಟಲ್ ಮೂಲಕ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದವರು ತಮ್ಮ ದೂರುಗಳನ್ನು ಪೋರ್ಟಲ್‍ನಲ್ಲಿ ದಾಖಲಿಸುವಂತೆ ಹಾಗೂ ಅರ್ಜಿದಾರರ ದೂರುಗಳ ಸ್ಥಿತಿಯ ಮಾಹಿತಿಯನ್ನು ಪಡೆಯಬಹುದಾಗಿದೆ. ಆದ್ದರಿಂದ ಈ ಆನ್‍ಲೈನ್ www.ncm.nic.in ಪೋರ್ಟಲ್ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ www.gokdom.kar.nic.in ಅನ್ನು ಮತ್ತು ಕಚೇರಿ ದೂ.ಸಂ.08272-225528/220214 ಹಾಗೂ ಇಲಾಖಾ ವೆಬ್‍ಸೈಟ್ www.gokdom.kar.nic.in ನಿಂದ ಅಲ್ಪಸಂಖ್ಯಾತರ ಎಲ್ಲಾ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮತ್ತು ಇತರೆ ಸೌಲಭ್ಯಗಳ ಮಾಹಿತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಿಂಗರಾಜಪ್ಪ ಅವರು ತಿಳಿಸಿದ್ದಾರೆ.