ಗೋವುಗಳ ಹತ್ಯೆ ನಿರಂತರ : ಕಾರೆಕಾಡು ಗ್ರಾಮದಲ್ಲಿ ಹಸುವಿನ ಮೃತದೇಹ ಪತ್ತೆ

November 20, 2020

ಮಡಿಕೇರಿ ನ.20 : ಹೊಸೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಗೋವುಗಳ ಹತ್ಯೆ ಪ್ರಕರಣ ಮುಂದುವರೆದಿದ್ದು, ಕಾರೆಕಾಡು ಗ್ರಾಮದಲ್ಲಿ ಏಳು ವರ್ಷದ ಹಸುವೊಂದನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ.
ಸ್ಥಳೀಯ ನಿವಾಸ ನಂದಕುಮಾರ್ ಎಂಬುವವರ ಹಾಲು ನೀಡುತ್ತಿದ್ದ ಹಸುವೊಂದು ಎರಡು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇಂದು ಹಸುವಿನ ಮೃತದೇಹ ತೋಟದ ಸಮೀಪದ ಹುಲ್ಲುಗಾವಲಿನಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಮಾಂಸಕ್ಕಾಗಿ ಹಸುವನ್ನು ಉಸಿರುಗಟ್ಟಿಸಿ ಕೊಂದಿದ್ದು, ಭಯದಿಂದ ಮೃತದೇಹವನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿರಬಹುದೆಂದು ಶಂಕಿಸಲಾಗಿದೆ. ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ದೃಶ್ಯ ಕಂಡು ಬಂದಿದೆ.
ನಂದಕುಮಾರ್ ಅವರು ದೂರು ನೀಡಿದ ಹಿನ್ನೆಲೆ ಸಿದ್ದಾಪುರ ಪೆÇಲೀಸ್ ಪೆÇಲೀಸ್ ಉಪನಿರೀಕ್ಷಕ ಮೋಹನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.
ಎರಡು ವಾರದ ಹಿಂದೆ ಹೊಸೂರು ಚೆಪ್ಪುಡಿರ ಸುಭಾಶ್ ಮುತ್ತಣ್ಣ ಎಂಬುವವರ ಕಾಫಿ ತೋಟದಲ್ಲಿ ಕೋಣವೊಂದನ್ನು ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಇತ್ತೀಚೆಗೆ ವಾಟೆಪಾರೆ ಹೊಸೂರು ವ್ಯಾಪ್ತಿಯ ಬಿದ್ದಂಡ ಕುಟುಂಬಸ್ಥರ ತೋಟದಲ್ಲಿ ಗೂಳಿಯನ್ನು ಕೊಲ್ಲಲಾಗಿತ್ತು.
ಗೋಹತ್ಯೆ ನಿರಂತರವಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ಗ್ರಾಮಸ್ಥರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

error: Content is protected !!