ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ

21/11/2020

ನವದೆಹಲಿ ನ.21 : ದೇಶದಲ್ಲಿ 48 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಲೀಟರ್ ಗೆ ತಲಾ ಮೂರು ಪೈಸೆ ಏರಿಕೆಯಾಗಿದೆ.
ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್ ಪ್ರಕಾರ, ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ಬೆಲೆಯನ್ನು 22 ರಿಂದ 25 ಪೈಸೆ ಮತ್ತು ಪೆಟ್ರೋಲ್ ಅನ್ನು ಪ್ರತಿ ಲೀಟರ್ ಗೆ 17 ರಿಂದ 20 ಪೈಸೆ ಹೆಚ್ಚಿಸಲಾಗಿದೆ.
ಕಳೆದ ವಾರ ಒಪೆಕ್ ಸದಸ್ಯರು ತೈಲ ನಿಕ್ಷೇಪ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕ ಒಪ್ಪಿಕೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ದೇಶೀಯ ಮಾರುಕಟ್ಟೆಯಲ್ಲಿ, ಡೀಸೆಲ್ ಬೆಲೆಯಲ್ಲಿ ಕೊನೆಯ ಪರಿಷ್ಕರಣೆ ಅಕ್ಟೋಬರ್ 2 ರಂದು ಕಂಡುಬಂದಿತ್ತು, ಪೆಟ್ರೋಲ್ ಬೆಲೆ ಕಳೆದ 58 ದಿನಗಳಿಂದ ಸ್ಥಿರವಾಗಿತ್ತು.ಪೆಟ್ರೋಲ್ ಬೆಲೆಯನ್ನು ಕೊನೆಯದಾಗಿ ಸೆಪ್ಟೆಂಬರ್ 22 ರಂದು ಪ್ರತಿ ಲೀಟರ್‍ಗೆ 7 ರಿಂದ 8 ಪೈಸೆ ಇಳಿಕೆಯಾಗಿತ್ತು.