ವಿರಾಜಪೇಟೆಯ ಛತ್ರಕೆರೆಗೆ ಮೀನು ಮರಿಗಳ ಬಿತ್ತನೆ

November 21, 2020

ವಿರಾಜಪೇಟೆ ನ. 21 : ಯುವಕರಿಗೆ ಸ್ವಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಿರಾಜಪೇಟೆಯ ಚಿಕ್ಕಪೇಟೆ ಸಮೀಪದ ಛತ್ರಕೆರೆಯಲ್ಲಿ ವಿವಿಧ ತಳಿಗಳ ಮೀನು ಮರಿಗಳನ್ನು ಬಿತ್ತನೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ರಾಜ್ಯ ಸರ್ಕಾರವು ಯುವ ಸಮೂದಾಯಕ್ಕೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳ ಭಾಗವಾಗಿ ಪ.ಪಂ ವತಿಯಿಂದ ಶಿವಕೇರಿಯ ನಿವಾಸಿ ಅರುಣ್ ಕುಮಾರ್ ಅವರು 1 ಲಕ್ಷದ 80 ಸಾವಿರ ಮೊತ್ತದ ಟೆಂಡರ್ ಪಡೆದುಕೊಂಡು ಕೆರೆಯಲ್ಲಿ ವಿವಿಧ ತಳಿಗಳ ಮೀನುಗಳ ಅಭಿವೃದ್ದಿ ಮತ್ತು ಮಾರಾಟ ಮಾಡುವ ಸದುದ್ದೇಶದಿಂದ ಸ್ವ ಉದ್ಯೋಗ ಕಂಡುಕೊಂಡಿದ್ದಾರೆ. ಅವರ ಜೀವನ ಸುಧಾರಣೆಯಾಗಲಿದೆ. ಇದರೊಂದಿಗೆ ಕೆರೆಯ ಅಭಿವೃದ್ದಿಯಾಗಲಿದೆ. ಕೆರೆಯ ಸುತ್ತಮುತ್ತಲಿನಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಿ ಮೀನು ಸಾಕಣೆ ಉತ್ತಮವಾಗಿ ಮೂಡಿ ಬರಲಿ ಎಂದು ಶುಭಹಾರೈಸಿದರು.

ಪ.ಪಂ ಅಧ್ಯಕ್ಷೆ ಸುಶ್ಮೀತಾ, ಉಪಧ್ಯಕ್ಷ ಕೆ.ಬಿ. ಹರ್ಷವರ್ಧನ್, ಸದಸ್ಯರಾದ ಆಶಾ ಸುಬ್ಬಯ್ಯ, ರಾಜೇಶ್ ಪದ್ಮನಾಭ, ಪಟ್ಟಣ ಪಂಚಾಯತಿ ಮುಖ್ಯಧಿಕಾರಿಗಳಾದ ಶ್ರೀಧರ್, ಪಟ್ಟಣ ಪಂಚಾಯತಿ ಚುನಾಯಿತ ಪ್ರತಿನಿಧಿಗಳು. ಭಾ.ಜ.ಪ ಮುಖಂಡರಾದ ಪಟ್ರಪಂಡ ರಘುನಾಣಯ್ಯ ಮತ್ತು ಇತರರು ಹಾಜರಿದ್ದರು.

error: Content is protected !!