ವಿರಾಜಪೇಟೆಯಲ್ಲಿ ರೂ. 50 ಲಕ್ಷ ವೆಚ್ಚದ ಆಮ್ಲಜನಕ ಘಟಕ ಉದ್ಘಾಟನೆ

21/11/2020

ವಿರಾಜಪೇಟೆ ನ. 21 : ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ ರೂ. 50 ಲಕ್ಷ ವೆಚ್ಚದ ಆಮ್ಲಜನಕ ಘಟಕವನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಶಾಸಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಮೇಲ್ದರ್ಜಗೆ ಏರಿಸುವ ಪ್ರಯತ್ನ ಸಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಸ್ಪತ್ರೆಗಳ ಬೇಡಿಕೆಗಳ ಅನುಸಾರವಾಗಿ ಅನುದಾನಗಳನ್ನು ಬಿಡುಗಡೆಗೊಳಿಸಿ ಸಮಸ್ಯೆಗಳನ್ನು ನೀಗಿಸುತ್ತಿದೆ. ಇಲ್ಲಿನ ಆಸ್ಪತ್ರೆಯ ಬಹು ಬೇಡಿಕೆಯ ಯೋಜನೆಯಾದ ಆಮ್ಲಜನಕ ಘಟಕದ ಬಗ್ಗೆ ಸಾರ್ವಜನಿಕರು ಮತ್ತು ಆಸ್ಪತ್ರೆಯ ವೈಧ್ಯರ ಬೇಡಿಕೆಯಂತೆ ಐವತ್ತು ಲಕ್ಷ ವೆಚ್ಚದಲ್ಲಿ ಆಮ್ಲಜನಕ ಘಟಕ ಉದ್ಘಾಟನೆಗೊಂಡಿದೆ. ಆದರೆ
ವೈಧ್ಯರ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ತಜ್ಞ ವೈಧ್ಯರ ನೇಮಕಾತಿ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಡಾ. ವಿಶ್ವನಾಥ್ ಸಿಂಪಿ ಮಾತನಾಡಿ, ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕವಿಲ್ಲದೆ ಕೃತಕ ಆಮ್ಲಜನಕ ಕಿಟ್( ಸಿಲಿಂಡರ್) ನ್ನು ಸಂಭಂದಿಸಿದ ರೋಗಿಗಳಿಗೆ ಒದಗಿಸಿಸಲಾಗುತಿತ್ತು. ಶಾಸಕರ ಬಳಿ ಸಮಸ್ಯೆಯನ್ನು ತಿಳಿಸಿದ ನಂತರದಲ್ಲಿ. ಆಮ್ಲಜನಕ ಘಟಕ ಸ್ಥಾಪನೆಯಾಗಿ ಉದ್ಘಾಟನೆಗೊಂಡು ಬೇಡಿಕೆಯು ಇಡೇರಿದೆ. ಇದರಿಂದ ಆಮ್ಲಜನಕ ದೊರಕದೇ ಪ್ರಾಣ ಕಳೆದುಕೊಳ್ಳುತಿದ್ದ ರೋಗಿಗೆ ಮರು ಜನ್ಮ ನೀಡಿದಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷೆ ಸುಶ್ಮೀತಾ, ಉಪಧ್ಯಕ್ಷ ಕೆ.ಬಿ.ಹರ್ಷವರ್ಧನ್, ಸದಸ್ಯ ಸಿ.ಕೆ. ಪ್ರತ್ವಿನಾಥ್ ಜಿ.ಪಂ ಸದಸ್ಯರಾದ ಶಶಿ ಸುಬ್ರಮಣಿ, ವೈಧ್ಯರಾದ ಡಾ. ಅನೀಲ್ ಧವನ್, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಭಾ.ಜ.ಪ ಮುಖಂಡರು ಹಾಜರಿದ್ದರು.