ನ.22 ರಂದು ಕೊಡವ ಮಕ್ಕಡ ಕೂಟದ ವತಿಯಿಂದ ನಾಲ್ಕು ಪುಸ್ತಕಗಳ ಅನಾವರಣ

21/11/2020

ಮಡಿಕೇರಿ ನ. 21 : ಕೊಡವ ಮಕ್ಕಡ ಕೂಟದ ವತಿಯಿಂದ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪಣ್ಣ ಹಾಗೂ ರಾಣು ಅಪ್ಪಣ್ಣ ದಂಪತಿಗಳ ದಾಖಲೀಕೃತ ಒತ್ತಜೋಡಿ, ಚಂಗೀರ, ಅಪ್ಪಣ ದಂಪತಿಯ ಕಂಡ ಅಮೇರಿಕಾ ಹಾಗೂ ಅಪ್ಪಣ ದಂಪತಿಯ ಕಂಡ ಯುರೋಪ್ ಎಂಬ ನಾಲ್ಕು ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವು ನ. 22 ರಂದು ನಡೆಯಲಿದೆ ಎಂದು ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಹಿರಿಯ ಸಾಹಿತಿ, ಬರಹಗಾರರು ಹಾಗೂ ಸಂಗ್ರಹಗಾರ ಬಾಚರಣಿಯಂಡ ಪಿ.ಅಪ್ಪಣ್ಣ, ಹಿರಿಯ ಸಾಹಿತಿ, ಬರಹಗಾರರು ಹಾಗೂ ಸಂಗ್ರಹಗಾರರಾದ ಬಾಚರಣಿಯಂಡ ರಾಣು ಅಪ್ಪಣ್ಣ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜ ಸೇವಕ ಮಯೂರ್ ಸುಬ್ಬಯ್ಯ, ಮೈಸೂರಿನ ಶಾರದಾ ಜ್ಯುವೆಲರ್ಸ್‍ನ ಪಾಲುದಾರ ಎಸ್.ಬಿ.ಅರುಣಾಚಲ ಭಾಗವಹಿಸಲಿದ್ದಾರೆ.
ಹಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ದಂಪತಿಗಳು ಮಾಡಿದ ಅಪಾರ ಸೇವೆಯನ್ನು ಗುರುತಿಸಿ ಅವರ ಅಭಿನಂದನಾ ಗ್ರಂಥವನ್ನು ಮಾಡಬೇಕೆಂದು ಕೊಡವ ಮಕ್ಕಡ ಕೂಟ ತೀರ್ಮಾನಿಸಿತು. ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಸಂಪಾದಕೀಯದಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ದಂಪತಿಗಳ ಕಂಡಂತೆ ಹಲವು ಸಾಹಿತಿಗಳ, ಬರಹಗಾರರ, ಅಭಿಮಾನಿಗಳ, ಕುಟುಂಬಸ್ಥರ ಹಾಗೂ ವಿದ್ಯಾರ್ಥಿಗಳು ಬರೆದ ನಾಲ್ಕು ಭಾಷೆಗಳ ಬರಹವನೆಲ್ಲ ಸಂಗ್ರಹಿಸಿದ ಅಭಿನಂದನಾ “ಒತ್ತ ಜೋಡಿ” ಗ್ರಂಥವನ್ನು ಮೇರಿಯಂಡ ಸಿ, ನಾಣಯ್ಯ ಅನಾವರಣಗೊಳಿಸಲಿದ್ದಾರೆ.
ಅಲ್ಲದೇ ಹಲವು ವರ್ಷಗಳಿಂದ ಸಂಗ್ರಹಿಸಿದ ಪುರಾತನ ವಸ್ತುಗಳ ದಾಖಲೀಕೃತ “ಚಂಗೀರ” ಪುಸ್ತಕವನ್ನು ಶಾಂತೆಯಂಡ ವೀಣಾಅಚ್ಚಯ್ಯ ಬಿಡುಗಡೆ ಮಾಡಲಿದ್ದಾರೆ.
ಬಾಚರಣಿಯಂಡ ಅಪ್ಪಣ್ಣ ದಂಪತಿಗಳ ಅಮೇರಿಕಾ ಹಾಗೂ ಯೂರೋಪ್ ಪ್ರವಾಸದ ಅನುಭವದ “ಅಪ್ಪಣದಂಪತಿಯ ಕಂಡ ಅಮೆರಿಕ” ಪುಸ್ತಕವನ್ನು ಡಾ.ಪಾರ್ವತಿ ಅಪ್ಪಯ್ಯ ಹಾಗೂ “ಅಪ್ಪಣ್ಣ ದಂಪತಿಯಕಂಡ ಯೂರೋಪ್” ಪುಸ್ತಕವನ್ನು ಅಜ್ಜಮಾಡ ರಮೇಶ್‍ಕುಟ್ಟಪ್ಪ ಅನಾವರಣ ಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡವ ವiಕ್ಕಡ ಕೂಟದಿಂದ ಬಾರಣಿಯಂಡ ಅಪ್ಪಣ ಹಾಗೂ ರಾಣುದಂಪತಿಗಳಿನ್ನು ಸನ್ಮಾನಿಸಿ ಗೌರವಿಸಲಾಗವುದು ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು, ಅಭಿಮಾನಿಗಳು, ಬಾಚರಣಿಯಂಡ ಅಪ್ಪಣದಂಪತಿಗಳ ಕುಟುಂಬಸ್ಥರು ಹಾಗೂ ಕೊಡವ ಮಕ್ಕಡಕೂಟದ ಸದಸ್ಯರು ಪಾಲ್ಗೊಳ್ಳಲಿದ್ದಾರೆ.