ಕೊಡಗರ ಹಳ್ಳಿಯಲ್ಲಿ ಕಾಡಾನೆ ದಾಳಿ : ಕೃಷಿ ನಾಶ

21/11/2020

ಸುಂಟಿಕೊಪ್ಪ,ನ.21: ಕಾಡಾನೆಗಳ ಹಿಂಡು ಕೊಡಗರ ಹಳ್ಳಿ ವ್ಯಾಪ್ತಿಯ ಕೃಷಿಕರ ಗದ್ದೆಗಳಿಗೆ ನುಗ್ಗಿ ಕೃಷಿಫಸಲನ್ನು ತಿಂದು ದ್ವಂಸಗೊಳಿಸಿ ಅಪಾರ ಪ್ರಮಾಣದ ನಷ್ಟವುಂಟಾಗಿರುವ ಬಗ್ಗೆ ವರದಿಯಾಗಿದೆ.
ಕೊಡಗರಹಳ್ಳಿಯ ನಿವಾಸಿ ಎ.ಎಂ.ಕಾರ್ಯಪ್ಪ, ಚಂಗಪ್ಪ, ಎ.ಎ.ರಾಜೇಂದ್ರ ಅವರ ಭತ್ತದ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ಕಟಾವಿಗೆ ಬಂದ ಭತ್ತದ ಪೈರುಗಳನ್ನು ತಿಂದು ದ್ವಂಸಗೊಳಿಸಿದ್ದು ಆಂದಾಜು ರೂ. ಒಂದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಎ.ಎ.ರಾಜೇಂದ್ರ ಅವರ ತೋಟಕ್ಕೂ ಆನೆಗಳು ನುಗ್ಗಿ ಹಣ್ಣಾಗಿರುವ ಕಾಫಿ ಗಿಡಗಳನ್ನು ನಾಶ ಪಡಿಸಿವೆ. ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಕಾಡಾನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ ಕಾಫಿ ಕೊಯ್ಯಲು ಆರಂಭಗೊಂಡಿದೆ. ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ.