ಮತದಾರರ ಪಟ್ಟಿ ಪರಿಷ್ಕರಣೆ : ಡಿ. 17 ರವರೆಗೆ ಕಾಲಾವಕಾಶ

21/11/2020

ಮಡಿಕೇರಿ ನ.21 : ಭಾರತ ಚುನಾವಣಾ ಆಯೋಗದ ಅನುಮೋದನಾ ಪತ್ರ 2020 ರ ಸೆಪ್ಟೆಂಬರ್ 4 ರಂತೆ ಅರ್ಹತಾ ದಿನಾಂಕ: 01-01-2021ರಂತೆ ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ಕ್ಕೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ಕೈಬಿಡುವುದು ಅಥವಾ ತೆಗೆದುಹಾಕುವುದು, ತಿದ್ದುಪಡಿ, ವರ್ಗಾವಣೆ ಮಾಡಿಕೊಳ್ಳಲು ಡಿಸೆಂಬರ್, 17 ರವರೆಗೆ ಕಾಲಾವಕಾಶವಿದೆ.
ಆದ್ದರಿಂದ ವಿರಾಜಪೇಟೆ ತಾಲ್ಲೂಕಿನ ಸಾರ್ವಜನಿಕರು ಈ ಕಾಲಾವಕಾಶವನ್ನು ಉಪಯೋಗಿಸಿಕೊಳ್ಳಲು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿದ ಅರ್ಜಿಗಳನ್ನು ನಿಗದಿತ ನಮೂನೆಗಳಲ್ಲಿ ಮತ್ತು ಅಗತ್ಯವಾದ ದಾಖಲೆಗಳೊಂದಿಗೆ ಸಂಬಂಧಪಟ್ಟ ಬಿ.ಎಲ್.ಓ ರವರುಗಳಲ್ಲಿ ಸಲ್ಲಿಸಿಕೊಳ್ಳಬಹುದಾಗಿದೆ ಎಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ನಂದೀಶ್ ಅವರು ಕೋರಿದ್ದಾರೆ.