ನೂತನ ತಾಲ್ಲೂಕು ಅಧಿಸೂಚನೆ ಘೋಷಣೆ : ಕುಶಾಲನಗರ ಬಿಜೆಪಿ ಸಂಭ್ರಮಾಚರಣೆ

21/11/2020

ಕುಶಾಲನಗರ ನ. 21 : ಕುಶಾಲನಗರವನ್ನು ಕೇಂದ್ರವನ್ನಾಗಿಸಿ ನೂತನ ತಾಲೂಕು ಅಧಿಸೂಚನೆ ಘೋಷಣೆಯಾದ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಗಣಪತಿ ದೇವಾಲಯದ ಮುಂಭಾಗ ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ, ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್, ಸಂಸತ್ ಸದಸ್ಯ ಪ್ರತಾಪ್‍ಸಿಂಹ ಪರ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಬಿಜೆಪಿ ತಾಲೂಕು ವಕ್ತಾರ ಕೆ.ಜಿ.ಮನು ಮಾತನಾಡಿ, ಎರಡು ದಶಕಗಳಿಂದ ಕಾವೇರಿ ತಾಲೂಕು ಯೋಜನೆ ನೆನೆಗುದಿಗೆ ಬಿದ್ದಿತ್ತು. ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಕಾಳಜಿಯಿಂದ ನೂತನ ತಾಲೂಕು ಘೋಷಣೆಯಾಗಲು ಕಾರಣವಾಗಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಉತ್ತಮ ಸೇವೆ ದೊರಕಲಿದೆ ಎಂದರು.
ನೂತನ ತಾಲೂಕು ಅಧಿಕೃತ ಘೋಷಣೆ ಹಿನ್ನಲೆಯಲ್ಲಿ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.
ವಿಜಯೋತ್ಸವ ಸಂದರ್ಭ ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯ ಗಣೇಶ್, ಕುಡಾ ಸದಸ್ಯರಾದ ವಿ.ಡಿ.ಪುಂಡರೀಕಾಕ್ಷ, ವೈಶಾಖ್, ಪಪಂ ಸದಸ್ಯರಾದ ಎಂ.ವಿ.ನಾರಾಯಣ್, ಬಿಜೆಪಿ ನಗರ ಅಧ್ಯಕ್ಷ ವಿ.ಎನ್.ಉಮಾಶಂಕರ್, ಬಿಜೆಪಿ ಪ್ರಮುಖ ಜಿ.ಎಲ್.ನಾಗರಾಜ್, ಶಿವಾಜಿ, ದೇವರಾಜ್, ವರದ, ಸೋಮಶೇಖರ್, ಶಿವಾನಂದ್, ರುದ್ರಾಂಬಿಕೆ, ವೇದಾವತಿ, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಇದ್ದರು.