ಕೊಡಗು ಪತ್ರಕರ್ತರ ಕ್ರಿಕೆಟ್ : ಪ್ರೆಸಿಡೆಂಟ್ ಇಲೆವನ್ ತಂಡ ಚಾಂಪಿಯನ್

22/11/2020

ಮಡಿಕೇರಿ ನ.22 : ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಸಂಘದ ಕ್ರೀಡಾ ಸಮಿತಿ ಆಶ್ರಯದಲ್ಲಿ ನಗರದ ಫೀ. ಮಾ. ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರೆಸಿಡೆಂಟ್ ಇಲೆವನ್ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು.
ಕ್ರೀಡಾಕೂಟದಲ್ಲಿ 6 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಎ ಪೋಲ್‍ನಿಂದ ಪ್ರೆಸಿಡೆಂಟ್ ಇಲೆವೆನ್, ಬಿ ಪೋಲ್‍ನಿಂದ ಡ್ರೀಂ ಹಂಟರ್ಸ್ ತಂಡಗಳು ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಪ್ರೆಸಿಡೆಂಟ್ ಇಲೆವೆನ್ ತಂಡ ನಿಗದಿತ 6 ಓವರ್‍ನಲ್ಲಿ 1 ವಿಕೆಟ್ ಕಳೆದುಕೊಂಡು 97 ರನ್ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ ಡ್ರೀಂ ಹಂಟರ್ಸ್ ತಂಡ, ನಾಯಕ ಮಂಜು ಸುವರ್ಣರವರ ಆಕರ್ಷಕ (56)ಅರ್ಧ ಶತಕ ನೆರವಿನೊಂದಿಗೆ 4 ವಿಕೆಟ್‍ಗೆ 77 ರನ್ ದಾಖಲಿಸಿ ಗೆಲುವಿನ ದಡ ಸೇರುವಲ್ಲಿ ವಿಫಲವಾಯಿತು. ಪರಿಣಾಮ ಪ್ರೆಸಿಡೆಂಟ್ ಇಲೆವೆನ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಡ್ರೀಂ ಹಂಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುಂಚಿತವಾಗಿ ಎ ಪೋಲ್‍ನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಸೋತ ಪ್ರೆಸಿಡೆಂಟ್ ಇಲೆವೆನ್ ತಂಡ ನಿಗದಿತ ಓವರ್‍ನಲ್ಲಿ 1 ವಿಕೆಟ್‍ಗೆ 93 ರನ್ ಕಲೆ ಹಾಕಿತ್ತು. ತಂಡದ ಪರ ನಾಯಕ ಶಿವರಾಜ್ 25 ಎಸೆತದಲ್ಲಿ 54 ರನ್ ಕಲೆಹಾಕಿದರು. ಗುರಿ ಬೆನ್ನತ್ತಿದ ಡ್ರೀಮ್ ಇಲೆವೆನ್ ತಂಡ 4 ವಿಕೆಟ್ 64 ದಾಖಲಿಸಿ ಸೋಲುಂಡಿತ್ತು. ಮತ್ತೊಂದು ಪಂದ್ಯದಲ್ಲಿ ಟಾಸ್ ಸೋತ ಫಾರೆಸ್ಟ್ ಫ್ಲವರ್ ತಂಡ ನಿಗದಿತ ಓವರ್‍ನಲ್ಲಿ 4 ವಿಕೆಟ್‍ಗೆ 58 ರನ್ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ ಪ್ರೆಸಿಡೆಂಟ್ ಇಲೆವೆನ್ ತಂಡ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದ ಫಾರೆಸ್ಟ್ ಫ್ಲವರ್ ತಂಡ ನಿಗದಿತ 6 ಓವರ್‍ನಲ್ಲಿ 5 ವಿಕೆಟ್‍ಗೆ 68 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಡ್ರೀಂ ಇಲೆವೆಲ್ ತಂಡ 9 ವಿಕೆಟ್ ಕಳೆದುಕೊಂಡು 62 ರನ್ ಗಳಿಸಲಷ್ಟೆ ಶಕ್ತವಾಯಿತು.

ಬಿ ಪೋಲ್‍ನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಮಾಸ್ಟರ್ ಬ್ಲಾಸ್ಟರ್ಸ್ ತಂಡ ನಿದಿತ ಓವರ್‍ನಲ್ಲಿ 1 ವಿಕೆಟ್‍ಗೆ 147 ರನ್‍ಗಳ ಬೃಹತ್‍ಮೊತ್ತವನ್ನು ದಾಖಲಿಸಿತು. ತಂಡದ ನಾಯಕ ಆದರ್ಶ್ ಅದ್ಕಲೇಗಾರ್ 27 ಎಸೆತಗಳಲ್ಲಿ 11 ಸಿಕ್ಸರ್, 5 ಬೌಂಡರಿ ನೆರವಿನೊಂದಿಗೆ 94 ರನ್ ಸಿಡಿಸಿದರು. ಗುರಿ ಬೆನ್ನತ್ತಿದ ಟೀಂ ಟುವೆಲ್ ತಂಡ 2 ವಿಕೆಟ್ ಕಳೆದುಕೊಂಡು 74 ರನ್‍ಗಳಿಸಿ ಸೋಲುಂಡಿತ್ತು. ಮತ್ತೊಂದು ಪಂದ್ಯದಲ್ಲಿ ಟಾಸ್ ಸೋತ ಡ್ರೀಂ ಹಂಟರ್ಸ್ ತಂಡ 4 ವಿಕೆಟ್‍ಗೆ 62 ರನ್ ಕಲೆ ಹಾಕಿತು. ತಂಡದ ಪರ ಆದಿತ್ಯ 39 ರನ್ ದಾಖಲಿಸಿದರು. ಗೆಲುವಿನ ಗುರಿ ಬೆನ್ನತ್ತಿದ ಡ್ರೀಂ ಹಂಟರ್ಸ್ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಲೀಗ್ ಪಂದ್ಯಾಟದ ಕೊನೆಯ ಪಂದ್ಯದಲ್ಲಿ ಸೋತ ಮಾಸ್ಟರ್ ಬ್ಲಾಸ್ಟರ್ಸ್ ತಂಡ ನಿಗದಿತ 5 ವಿಕೆಟ್‍ಗೆ 44 ರನ್‍ಗಳಿಸಿತು. ಅಲ್ಪ ಮೊತ್ತವನ್ನು ಬೆನ್ನತ್ತಿದ ಡ್ರೀಂ ಹಂಟರ್ಸ್ ತಂಡ 3.1 ಓವರ್‍ನಲ್ಲಿ ಗುರಿ ತಲುಪಿತು.
::: ಡ್ರೀಂ ಇಲೆವೆನ್‍ಗೆ ಮೂರನೇ ಸ್ಥಾನ :::

ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಸಿದ 4 ತಂಡಗಳಲ್ಲಿ ಫಾರೆಸ್ಟ್ ಫ್ಲವರ್ ಮತ್ತು ಡ್ರೀಂ ಇಲೆವೆನ್ ತಂಡಗಳು ಮಾಸ್ಟರ್ ಬ್ಲಾಸ್ಟರ್ಸ್ ಮತ್ತು ಟೀಂ ಟುವೆಲ್ ತಂಡವನ್ನು ಮಣಿಸಿ ತೃತೀಯ ಸ್ಥಾನಕ್ಕೆ ಅರ್ಹತೆ ಪಡೆದುಕೊಂಡಿತ್ತು. ನಂತರ ಮೂರನೇ ಸ್ಥಾನಕ್ಕೆ ನಡೆದ 3 ಓವರ್‍ನ ಪಂದ್ಯಾಟದಲ್ಲಿ ಟಾಸ್ ಗೆದ್ದ ಫಾರೆಸ್ಟ್ ಫ್ಲವರ್ ತಂಡ 2 ವಿಕೆಟ್‍ಗೆ 27 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಟೀಂ ಟುವೆಲ್ ತಂಡ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
::: ವೈಯಕ್ತಿಕ ಪ್ರಶಸ್ತಿ :::
ಬೆಸ್ಟ್ ಕೀಪರ್-ವಿನೋದ್(ಡ್ರೀಂ ಹಂಟರ್ಸ್), ಬೆಸ್ಟ್ ಕ್ಯಾಚರ್-ನವೀನ್ ಡಿಸೋಜ(ಡ್ರೀಂ ಇಲೆವೆನ್), ಬೆಸ್ಟ್ ಫೀಲ್ಡರ್-ಪ್ರೇಮï(ಫಾರೆಸ್ಟ್ ಫ್ಲವರ್), ಬೆಸ್ಟ್ ಬ್ಯಾಟ್ಸ್‍ಮನ್-ಮಂಜು ಸುವರ್ಣ(ಡ್ರೀಂ ಹಂಟರ್ಸ್), ಮ್ಯಾನ್ ಆಫ್ ದಿ ಮ್ಯಾಚ್- ಕಲೀಲï(ಪ್ರೆಸಿಡೆಂಟ್ ಇಲೆವೆನ್), ಮ್ಯಾನ್ ಆಫ್ ದಿ ಸೀರಿಸ್ – ಶಿವರಾಜï(ಪ್ರೆಸಿಡೆಂಟ್ ಇಲೆವೆನ್), ಬೆಸ್ಟ್ ವುಮೆನ್ ಪ್ಲೇಯರ್-ರೇಖಾ ಗಣೇಶ್(ಪ್ರೆಸಿಡೆಂಟ್ ಇಲೆವೆನ್), ಬೆಸ್ಟ್ ಬೌಲರ್-ಸುನೀಲï ಪೆÇನ್ನೇಟಿ(ಪ್ರೆಸಿಡೆಂಟ್ ಇಲೆವೆನ್), ಹೈಯಸ್ಟ್ ಸಿಕ್ಸರ್-ಉದಯï ಮೊಣ್ಣಪ್ಪ(12)(ಫಾರೆಸ್ಟ್ ಫ್ಲವರ್), ಹೈಯಸ್ಟ್ ಸ್ಕೋರರ್- ಆದರ್ಶ್(93)(ಮಾಸ್ಟರ್ ಬ್ಲಾಸ್ಟರ್ಸ್), ಹೈಯಸ್ಟ್ ವಿಕೇಟ್- ಸುರೇಶ್(7)(ಫಾರೆಸ್ಟ್ ಫ್ಲವರ್), ಬೆಸ್ಟ್ ಅಲ್‍ರೌಂಡರ್-ಮಂಜು ಸುವರ್ಣ(ಡ್ರೀಂ ಹಂಟರ್ಸ್) ಪಡೆದುಕೊಂಡರು.

::: ಸಮಾರೋಪ ಸಮಾರಂಭ :::

ಶನಿವಾರ ನಡೆದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭೆ ಪೌರಾಯುಕ್ತ ರಾಮದಾಸ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಷ್ಟ್ರೀಯ ಸಮಿತಿ ಸದಸ್ಯರಾದ ಎಸ್.ಎ.ಮುರಳಿಧರ್, ಪರ್ತಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ವಿರಾಜಪೇಟೆ ತಾಲೂಕು ಸಂಘದ ಉಪಾಧ್ಯಕ್ಷ ಪಾರ್ಥ ಚಿಣ್ಣಪ್ಪ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್, ಹಿರಿಯ ಪತ್ರಕರ್ತರಾದ ಬಿ.ಸಿ.ದಿನೇಶ್, ಕೆ.ಎ.ಆದಿತ್ಯ ಉಪಸ್ಥಿತರಿದ್ದರು. ಕ್ರೀಡಾಕೂಟದ ವಿಜೇತರಿಗೆ ಗಣ್ಯರು ನೆನಪಿನ ಕಾಣಿಕೆ, ವೈಯುಕ್ತಿಕ ಪ್ರಶಸ್ತಿ ಹಾಗು ನಗದು ಬಹುಮಾನವನ್ನು ವಿತರಿಸಿದರು.