ಕೊಡಗಿನ ಕಾನೂನು ಸುವ್ಯವಸ್ಥೆ : ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಸಮಾಲೋಚನೆ

November 22, 2020

ಮಡಿಕೇರಿ ನ.22 : ಕೊಡಗಿನ ಕಾನೂನು ಸುವ್ಯವಸ್ಥೆ ಕುರಿತು ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಅವರು ಸಮಾಲೋಚನೆ ನಡೆಸಿದರು.
ಭಾನುವಾರ ಮಡಿಕೇರಿಗೆ ಆಗಮಿಸಿದ ಅವರು ಕಾವೇರಿ ಹಾಲ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಕೊಡಗಿನ ಮಾಹಿತಿ ಪಡೆದರು. ನಂತರ ವಿರಾಜಪೇಟೆ ತಾಲ್ಲೂಕಿಗೆ ಭೇಟಿ ನೀಡಿದ ಅವರು ಸಾರ್ವಜನಿಕರ ಸಂಪರ್ಕ ಸಭೆ ನಡೆಸಿದರು. ಸರ್ಕಾರದ ಸಾರಿಗೆ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತಿತರರು ಹಾಜರಿದ್ದರು.

error: Content is protected !!