ಆಯುರ್ವೇದ, ಯೋಗ ಜಗತ್ತಿಗೆ ಸಹಕಾರಿ

November 23, 2020

ಪಣಜಿ ನ.22 : ಕೋವಿಡ್-19 ನಂತರದ ತೊಂದರೆಗಳನ್ನು ಎದುರಿಸಲು ಆಯುರ್ವೇದ, ಯೋಗ ಮತ್ತು ಇತರ ವಿಧಾನಗಳು ಇಡೀ ಜಗತ್ತಿಗೆ ತುಂಬಾ ಸಹಕಾರಿಯಾಗಲಿವೆ ಎಂದು ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ) ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಆಯುಷ್ ಸಚಿವಾಲಯ ಜಂಟಿಯಾಗಿ ಆರಂಭಿಸಿರುವ ರಾಷ್ಟ್ರೀಯ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಆಯುರ್ವೇದವನ್ನು ಸೇರಿಸಲಾಗಿದೆ ಎಂದು ಸರಣಿ ಟ್ವೀಟ್ ಗಳಲ್ಲಿ ಅವರು ತಿಳಿಸಿದ್ದಾರೆ.
ಭಾರತ, ಕೋವಿಡ್-19 ಸಂದರ್ಭದಲ್ಲಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ, ಇದರ ಜೊತೆಗೆ ಅಂತಾರಾಷ್ಟ್ರೀಯ ಪ್ರಯತ್ನಗಳ ಮೂಲಕ ಬೆಂಬಲವೂ ಅಗತ್ಯವಾಗಿದೆ. ಕೋವಿಡ್-19ರಿಂದ ಗುಣಮುಖರಾಗಿ ನಂತರವೂ ತೊಂದರೆಗಳು ಬಾಧಿಸಿದರೆ ಇಡೀ ವಿಶ್ವಕ್ಕೆ ಆಯುರ್ವೇದ, ಯೋಗ ಮತ್ತು ಆಯುಷ್ ನ ಪದ್ಧತಿಗಳು ತುಂಬಾ ಸಹಾಯಕವಾಗುತ್ತವೆ ಎಂಬ ವಿಶ್ವಾಸ ತಮಗಿದೆ ಎಂದಿದ್ದಾರೆ.

error: Content is protected !!