ಟೀ ಕುಡಿದ ಸಾಧುಗಳ ಸಾವು

23/11/2020

ಮಥುರಾ ನ.23 : ಮಥುರಾದ ಆಶ್ರಮದಲ್ಲಿ ಟೀ ಕುಡಿದ ಸಾಧುಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತ ಸಾಧುಗಳನ್ನು ಗುಲಾಬ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಎಂದು ಗುರುತಿಸಲಾಗಿದ್ದು, ತೀವ್ರ ಅಸ್ವಸ್ಥರಾಗಿರುವ ಮತ್ತೋರ್ವ ಸಾಧುವನ್ನು ರಾಮ್ ಬಾಬು ಎಂದು ಗುರುತಿಸಲಾಗಿದೆ. ಅಸ್ವಸ್ಥರಾಗಿರುವ ಸಾಧುವನ್ನು ರಾಮ್ ಬಾಬು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಗುಲಾಬ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶ್ಯಾಮ್ ಸುಂದರ್ ಆಸ್ಪತ್ರೆಗೆ ದಾಖಲಿಸುವೇಳೆ ಸಾವನ್ನಪ್ಪಿದ್ದಾರೆ.
ಸಾಧುಗಳು ಟೀ ಕುಡಿದ ಬಳಿಕ ಅಸ್ವಸ್ಥರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ, ಈ ಬಗ್ಗೆ ಎಸ್‍ಎಸ್‍ಪಿ ಡಾ. ಗೌರವ್ ಗ್ರೋವರ್ ಮಾತನಾಡಿ, ವಿಧಿವಿಜ್ಞಾನದ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ತಂಡವು ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.