ನ.24 ರಂದು ವಣಚಲು ಗ್ರಾಮದಲ್ಲಿ ಪರ್ಯಾಯ ಇಂಧನ ಶಕ್ತಿ ಕುರಿತು ಕಾರ್ಯಗಾರ

November 23, 2020

ಮಡಿಕೇರಿ ನ.23 : ಒ.ಡಿ.ಪಿ. ಸಂಸ್ಥೆ ಮೈಸೂರು, ನಬಾರ್ಡ್ ಬೆಂಗಳೂರು ಮತ್ತು ಕೊಡಗು ಫಾರ್ ಟುಮಾರೊ ಇವರ ಸಹಯೋಗದಲ್ಲಿ ‘ಪರ್ಯಾಯ ಇಂಧನ ಶಕ್ತಿ ಮತ್ತು ಜೇನು ಕೃಷಿ’ ಯೋಜನೆಯ ಉದ್ಘಾಟನಾ ಸಮಾರಂಭವು ನ. 24 ರಂದು ಬೆಳಗ್ಗೆ 11.30 ಗಂಟೆಗೆ ವಣಚಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ವಿ.ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಉದ್ಘಾಟಿಸಲಿದ್ದಾರೆ. ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಗುರು ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ನಬಾರ್ಡ್ ಸಂಸ್ಥೆಯ ನಿವೃತ್ತ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮುಂಡಂಡ ಸಿ.ನಾಣಯ್ಯ, ಕೊಡಗು ಫಾರ್ ಟುಮಾರೊ ನಿರ್ದೇಶಕರಾದ ಕಾವೇರಪ್ಪ, ಮೈಸೂರು ಒಡಿಪಿ ಸಂಸ್ಥೆಯ ಮಹಿಳಾಭಿವೃದ್ಧಿ ಯೋಜನಾ ಸಂಯೋಜಕರಾದ ಮೋಲಿ ಪುಡ್ತಾದೊ ಇತರರು ಪಾಲ್ಗೊಳ್ಳಲಿದ್ದಾರೆ.