ವಣಚಲು ಗ್ರಾಮದ ಪ್ರತಿ ಮನೆ ಸೌರೀಕರಣ : ನ.24 ರಂದು ಯೋಜನೆ ಉದ್ಘಾಟನೆ

November 23, 2020

ಮಡಿಕೇರಿ ನ.23 : ಕೊಡಗು ಫಾರ್ ಟುಮಾರೊ ಎಂಬ ಯುವ ಸಂಘಟನೆ ಸುಸ್ಥಿರ ಜೀವನದ ಕಡೆಗೆ ಹೊಸ ಹೆಜ್ಜೆ ಇಟ್ಟಿದೆ. 2018 ರ ಅತಿವೃಷ್ಟಿಯಿಂದ ಹಾನಿಗೊಳಗಾದ ವಣಚಲು ಗ್ರಾಮದ ಪ್ರತಿ ಮನೆಯನ್ನೂ ಸೌರೀಕರಣಗೊಳಿಸಿದ್ದು, ಇದರ ಉದ್ಘಾಟನಾ ಸಮಾರಂಭ ನ.24 ರಂದು ಬೆಳಗ್ಗೆ 10:30 ಗಂಟೆಗೆ ನಡೆಯಲಿದೆ. ಇದು ಮೈಸೂರಿನ ಆರ್ಗನೈಸೇಶನ್ ಫಾರ್ ದಿ ಡೆವಲಪ್ಮೆಂಟ್ ಆಫ್ ಪೀಪಲ್ (ಒಡಿಪಿ) ಜಂಟಿ ಯೋಜನೆಯಾಗಿದ್ದು, ನಬಾರ್ಡ್ ಈ ಯೋಜನೆಯ ಏಕೈಕ ಪ್ರಾಯೋಜಕ ಸಂಸ್ಥೆಯಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಸೌರೀಕರಣ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

error: Content is protected !!