ನಾಕೂರು ಸಂಪರ್ಕ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್

23/11/2020

ಸುಂಟಿಕೊಪ್ಪ,ನ.23: ಸುಂಟಿಕೊಪ್ಪದಿಂದ ನಾಕೂರು ಸಂಪರ್ಕ ರಸ್ತೆ ಕಾಮಗಾರಿಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ 6 ಕೋಟಿ20 ಲಕ್ಷದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ನಾಕೂರುವರೆಗಿನ 6.64 ಕಿ.ಮೀ.ರಸ್ತೆ ಅಭಿವೃದಿ ಪಡಿಸಲಾಗುತ್ತಿದ್ದು ಶಾಸಕರು ಭೇಟಿ ಪರಿಶೀಲಿಸಿ ಮಾತನಾಡಿದ ಎಮ್ಮೆಗುಂಡಿಗೆ ತೆರಳುವ ರಸ್ತೆಯ ಬದಿಯಲ್ಲಿ ಒಂದು ಭಾಗದಲ್ಲಿ ಬಡಜನತೆಯು ಮನೆಯನ್ನು ನಿರ್ಮಿಸಿಕೊಂಡು ನೆಲೆಸಿದ್ದಾರೆ. ಇದರಿಂದ ಅಗಲೀಕರಣಕ್ಕೆ ತಡೆಯಾಗಿದ್ದು ಈ ಭಾಗದ ನಿವಾಸಿಗಳು ಮನೆಯ ಮುಂಭಾಗದ ತೋಟದ ಮಾಲೀಕರೊಂದಿಗೆ ಮನವೊಲಿಸಿ ರಸ್ತೆ ಆಗಲೀಕರಣಕ್ಕೆ ಬೇಕದ ಜಾಗವನ್ನು ತೆರವುಗೊಳಿಸಲು ಮನವೊಲಿಸುವಂತೆ ಸ್ಥಳೀಯ ನಿವಾಸಿಗಳಿಗೆ ತಿಳಿಸಿದರು.
ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವಾಗ ಗುಣ ಮಟ್ಟ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.