ಭಾಗಮಂಡಲದಲ್ಲಿ 100 ಫಲಾನುಭವಿಗಳಿಗೆ 5 ಸಾವಿರ ಜೇನಿನ ಎರಿ ವಿತರಣೆ

23/11/2020

ಮಡಿಕೇರಿ ನ.23 : ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಿಂದ ಜೇೀನು ಕೃಷಿಯ ತರಬೇತಿ ಪಡೆದ ನೂರು ಮಂದಿ ಫಲಾನುಭವಿಗಳಿಗೆ ತಲಾ 50 ರಂತೆ ಒಟ್ಟು 5 ಸಾವಿರ ಎರಿಗಳನ್ನು ವಿತರಿಸಲಾಯಿತು.
2018-19ನೇ ಸಾಲಿನಲ್ಲಿ ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೇಜರ್ ಹನಿ ಮಿಷನ್ ಯೋಜನೆಯಡಿ ಫಲಾನುಭವಿಗಳಿಗೆ ಜೇನುಕೃಷಿ ಬಗ್ಗೆ ತರಬೆÉೀತಿ ನೀಡಿ, ಜೇನುಪೆÀಟ್ಟಿಗೆ ಹಾಗು ಇತರೆ ಜೇನು ಕೃಷಿ ಉಪಕರಣಗಳನ್ನು ನೀಡಲಾಗಿತ್ತು.
ಇದೀಗ ಈ ಪಲಾನುಭವಿಗಳಿಗೆ ಪೂನಾದಲ್ಲಿರುವ ಭಾರತ ಸರ್ಕಾರದ ಖಾದಿ ಗ್ರಾಮೋದ್ಯೋಗ ಆಯೋಗದಿಂದ ಸರಬರಾಜು ಮಾಡಲಾದ ಕೃತಕ ಎರಿಯನ್ನು ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷರಾದ ಹೊಸೂರು ಜೆ. ಸತೀಶ್‍ಕುಮಾರ್ ವಿತರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಪೊಡನೋಳನ ಸಿ.ವಿಠಲ, ಆಡಳಿತ ಮಂಡಳಿ ನಿದೆರ್Éೀಶಕರು ಮತ್ತು ಸಂಘದ ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಜರಿದ್ದರು.