ಕೊಡಗು ಜಿಲ್ಲಾ ಫೈಝೀಝ್ ಅಧ್ಯಕ್ಷರಾಗಿ ನೌಶಾದ್ ಫೈಝಿ ಹೊಳಮಾಳ ಆಯ್ಕೆ

November 24, 2020

ಮಡಿಕೇರಿ ನ.24 : ಕೊಡಗು ಜಿಲ್ಲೆಯ 2020-21ನೇ ಸಾಲಿನ ಜಿಲ್ಲಾ ‌ಫೈಝೀಜ್ ಅಧ್ಯಕ್ಷರಾಗಿ ನೌಷಾದ್ ಫೈಝಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಹಸೈನಾರ್ ಫೈಝಿ ಶನಿವಾಸಂತೆ,ಕೋಶಾಧಿಕಾರಿಯಾಗಿ ಹನೀಫ್ ಫೈಝಿ ಗುಂಡಿಗೆರೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹಮೀದ್ ಫೈಝಿ ಕೊಟ್ಟಮುಡಿ, ಕುಞ್ಞಿ ಅಹ್ಮದ್ ಫೈಝಿ ಕೊಂಡಂಗೇರಿ ಆಯ್ಕೆಯಾಗಿದ್ದಾರೆ.
ಸಹ ಕಾರ್ಯದರ್ಶಿಯಾಗಿ ಉನೈಸ್ ಫೈಝಿ ಪೊನ್ನತ್ಮೊಟ್ಟೆ, ಶಮೀರ್ ಫೈಝಿ ಹೊಸತೋಟ ಹಾಗೂ 14 ಸದಸ್ಯರು ಕೊಡಗು ಜಿಲ್ಲಾ ಫೈಝೀಝ್ ಅಸೋಸಿಯೇಷನ್ ಸಮಿತಿಗೆ ಆಯ್ಕೆಯಾಗಿದ್ದಾರೆ.

ಪಟ್ಟಿಕಾಡ್ ಜಾಮಿಅ ನೂರಿಯ ಜೂನಿಯರ್ ಕಾಲೇಜು,ಪಾಣಕ್ಕಾಡ್ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಲ್ ಸ್ಮಾರಕ ಭವನ ಸುಂಟಿಕೊಪ್ಪದಲ್ಲಿ
ಕೊಡಗು ಜಿಲ್ಲಾ ಫೈಝೀಝ್ ಅಸೋಸಿಯೇಷನ್ ಮಹಾಸಭೆಯು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಜಿಲ್ಲಾ ನಾಇಬ್ ಖಾಝಿ ಶೈಖುನಾ ಅಬ್ದುಲ್ಲ ಫೈಝಿ ಎಡಪ್ಪಲಾ ಇವರ ಅಧ್ಯಕತೆಯಲ್ಲಿ ನಡೆಯಿತು.
ಅಬ್ದುಲ್ಲಾ ಸಲಾಂ ಫೈಝಿ ಎಡಪ್ಪಲಾ ಕಾರ್ಯಕ್ರಮವನ್ನ ಉದ್ಘಾಟಿಸಿದರು.
ಈ ಸಂದರ್ಭ ಉಮರ್ ಫೈಝಿ, ಹಮೀದ್ ಫೈಝಿ,ಆರಿಫ್ ಫೈಝಿ ಇದ್ದರು.
ಕರ್ನಾಟಕ ರಾಜ್ಯ ಫೈಝೀಝ್ ಪ್ರಧಾನಕಾರ್ಯದರ್ಶಿ ಅಶ್ರಫ್ ಮಿತ್ತಬೈಲು ಸ್ವಾಗತಿಸಿ, ಹಸೈನಾರ್ ಫೈಝಿ ವಂದಿಸಿದರು.

error: Content is protected !!