ಮಾಜಿ ಸಿಎಂ ತರುಣ್ ಗೊಗೊಯಿ ನಿಧನ

24/11/2020

ನವದೆಹಲಿ ನ.24 : ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರು ನಿಧನರಾಗಿದ್ದಾರೆ.
84 ವರ್ಷದ ತರುಣ್ ಗೊಗೊಯಿ ಅವರು ವಿಧಿವಶರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಪ್ರಕಟಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಗೌಹತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನವೆಂಬರ್ 2ರಿಂದ ಕೊರೋನಾ ನಂತರದ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಎರಡು ತಿಂಗಳ ಚಿಕಿತ್ಸೆ ಬಳಿಕ ಕೊರೋನಾದಿಂದ ಚೇತರಿಸಿಕೊಂಡಿದ್ದ ತರುಣ್ ಗೊಗೊಯಿ ಅವರು ಅಕ್ಟೋಬರ್ 25ರಂದು ಬಿಡುಗಡೆಯಾಗಿದ್ದರು. ಆದರೆ ಕೊರೋನಾ ಬಳಿಕದ ಸಮಸ್ಯೆಗಳಿಗೀಡಾಗಿದ್ದ ತರುಣ್ ಗೊಗೊಯಿ ಅವರು ನ.2ರಂದು ಆಸ್ಪತ್ರೆಗೆ ದಾಖಲಾಗಿದ್ದರು.