ಕನಸು ಕಲ್ಲಾಯ್ತು…

24/11/2020

ಪ್ರೀತಿ ಕಣ್ಣಿಗೆ ಕಾಣಲ್ಲ ಪ್ರೀತಿನ ಅನುಭವಿಸಿದವರಿಗೆ ಮಾತ್ರ ಗೊತ್ತು ಅದರ ನೋವು ಏನಂತ….
ಪ್ರೀತಿ ಕಲ್ಲಾಯ್ತು ಮನಸ್ಸು ಮರುಗಿತ್ತು. ಅದೇ ಚಿಂತೆಯಲ್ಲಿ ಮುಳುಗಿದ್ದ ಹರೀಶ ತಾನು ಹತಾಶೆಯಿಂದ ಕುಳಿ ತಿದ್ದ ನಾನು ಯಾವ ಪುರುಷತ್ವ ಗೋಸ್ಕರ ಪ್ರೀತಿ ಮಾಡಿದೆ ನನ್ನ ಪ್ರೀತಿಯು ಒಂದು ಮನಸ್ಸನ್ನು ಗೆಲ್ಲ ದೇ ಹೋಯಿತೆ ನನಗೆ ಪ್ರೀತಿಸುವ ಯೋಗ್ಯತೆ ಇಲ್ಲವೇ? ಎಂದು ಯೋಚಿಸುತ್ತಿದ್ದಂತೆ ತಕ್ಷಣ ಅವನ ನಯನಗಳಲ್ಲಿ ಕಣ್ಣೀರ ಕಂಬನಿ ಸುರಿಸಿದ್ದವು.

ಪ್ರೀತಿ ಎಂಬ ಪಯಣದಲ್ಲಿ ತಾನು ಸೋತೆ ನಾವು ಒಂದು ವಸ್ತುವನ್ನು ಬಯಸುವುದಕ್ಕೆ ಯೋಗ್ಯತೆ ಬೇಕು ಎಂದು ವ್ಯಥೆ ಪಟ್ಟ. ಒಂದು ಕ್ಷಣ ಅವನ ಮನಸ್ಸು ತಾನು ಕಳೆದ ದಿನಗಳನ್ನು ನೆನೆದಿತ್ತು. ನೀವೇ ಹೇಳಿ ಪ್ರೀತಿನೇ ಎಲ್ಲರೂ ಪಡೆಯೋಕೆ ಆಗುತ್ತಾ ದೇವರು ಸೂತ್ರದಾರ ಒಂದು ಹುಲ್ಲುಕಡ್ಡಿ ಕೂಡ ಅಲುಗಾಢ ಬೇಕಾದರೆ ದೈವಬಲ ಬೇಕೇ ಬೇಕು.

ಒಂದು ಕ್ಷಣ ತನ್ನ ತಾನು ಮರೆತ…. ಅದೊಂದು ಬೆಳಿಗ್ಗೆ ಒಂಬತ್ತರ ಸಮಯ ಆ ಸಮಯದಲ್ಲಿ ತನ್ನ ಕೆಲಸದ ನಿಮಿತ್ತ ಹೋಗುತ್ತಿದ್ದ. ಅಷ್ಟರಲ್ಲಿ ದೇವಲೋಕದಿಂದ ಧರೆಗಿಳಿದ ರಂಭೆಯಂತೆ ಕಂಗೊಳಿಸುತ್ತಿರುವ ರೂಪಸಿಯ ದರ್ಶನವಾಗಿತ್ತು. ನೋಡುತ್ತಲೇ “ವಾವ್ ಸೂಪರ್ ಎಂಥ ಸೌಂದರ್ಯ” ಆ ಬ್ರಹ್ಮ ಸೌಂದರ್ಯವನ್ನೇ ಕಡೆದು ತಿದ್ದಿ-ತೀಡಿ ಕಳಿಸಿದ್ದಾನೆ ಇನ್ನು ನನ್ನವಳಾದರೆ ಅದಕ್ಕಿಂತ ಪುಣ್ಯ ಬೇರೊಂದಿಲ್ಲ ಎಂದು ಕನಸುಕಂಡ. ತನಗರಿವಿಲ್ಲದಂತೆ ಅವಳಿಗೆ ಮನಸೋತ ತನ್ನೆದೆಯಲ್ಲೆ ಅವಳಿಗೊಂದು ಸ್ಥಾನ ನೀಡಿದ್ದ. ಅವನ ಮೌನ ನೋಡಿ ಅವಳಿಗೂ ಆಶ್ಚರ್ಯವಾಗಿತ್ತು ಕೇವಲ ನೋಡಿದ ಮಾತ್ರಕ್ಕೆ ಪ್ರೀತಿ ಆಗಲು ಸಾಧ್ಯವೇ ?.. ಎಂದು ಅವಳಿಗೆ ಪ್ರಶ್ನೆ ಕಾಡತೊಡಗಿತ್ತು. ತನ್ನ ಪಾಡಿಗೆ ತಾನು ಮುಂದೆ ಹೆಜ್ಜೆ ಹಾಕಿದ್ದಳು ಒಂದು ಹೆಣ್ಣು ಒಂದು ಹೃದಯಕ್ಕೆ ಮನಸ್ಸು ಕೊಟ್ಟಳು ಎಂದರೆ ಪ್ರಾಣ ಇರುವವರೆಗೂ ಮರೆಯೋದಿಲ್ಲ ಕಣ್ಣು ಬಿಟ್ಟು ನೋಡಿದಾಗ ರೂಪಸಿಯೇ ಕಾಣಲಿಲ್ಲ ಮನಸಿಗೆ ಬೇಸರವಾಯಿತು ಬಾಯಿಗೆ ಬಂದ ತುತ್ತು ಜಾರಿತಲ್ಲ ಎಂದು ಬೇಸರಗೊಂಡ. ಹುಡುಕೋಣವೆಂದರೆ ಹೆಸರು ವಿಳಾಸ ತಿಳಿಯದು ಚಿಂತೆ ಕಾಡಿತ್ತು. ಎಲ್ಲರ ಹಣೆಯ ಮೇಲೆ ದೇವರು ಒಂದು ಹೆಣ್ಣಿನ ಹೆಸರನ್ನು ಬರೆದಿರುತ್ತಾನೆ ಅಂತೆ ಬರೆದಿದ್ದರೆ ನನಗೆ ಅವಳು ಸಿಗಲೇಬೇಕು ಸಿಗುತ್ತಾಳೆ ಎಂದು ತಾನೇ ನನ್ನೊಳಗೆ ಸಮಾಧಾನಪಟ್ಟುಕೊಂಡು ತನ್ನ ಭಾರವಾದ ಮನಸಿನಲ್ಲಿಯೇ ಮುಂದೆ ಸಾಗಿದ..

ಆ ದಿನ ಅವನಿಗೆ ನಿದ್ರೆ ಭಾರದೇ ಹೋಯಿತು. ಕುಂತರು ನಿಂತರು ಅವಳದೇ ಬಿಂಬ ಕಾಣುತ್ತಿತ್ತು ನೀವೇ ಹೇಳಿ ಸೌಂದರ್ಯ ಎಂದರೆ ಹೆಣ್ಣಲ್ಲವೇ ಅವಳ ಕಣ್ಣೋಟ ಅಂದ ಚೆಂದ ಅವನನ್ನು ಹುಚ್ಚನಂತೆ ಮಾಡಿತ್ತು. ತಾನು ಮದುವೆಯಾದರೆ ಅವಳನ್ನೇ ಎಂಬ ಗಟ್ಟಿತನ ಅವನಲ್ಲಿ ಹೊಸ ಭಾಷ್ಯ ಬರೆದಿತ್ತು. ಎಲ್ಲವೂ ನಾವಂದುಕೊಂಡಂತೆ ನಡೆಯಬೇಕಲ್ಲ.. ನಾವು ಅಂದುಕೊಳ್ಳುವುದೇ ಒಂದು ಆಗುವುದು ಮತ್ತೊಂದು. ದಿನಕಳೆದಂತೆ ಪ್ರೀತಿ ಗರಿಗೆದರಿದ ಹಕ್ಕಿಯಂತೆ ಹೃದಯದ ತುಂಬಾ ಹರಡಿತ್ತು. ಹರೀಶ ಮಾತ್ರ ಅವಳಿಗಾಗಿ ಜಾತಕಪಕ್ಷಿಯಂತೆ ಕಾದಿದ್ದ. ಎತ್ತ ನೋಡಿದರೂ ಆ ರೂಪಸಿಯ ಸುಳಿವು ಸಿಗಲಿಲ್ಲ ಅವಳಿಗಾಗಿ ಹುಡುಕಾಡಿ ಹುಡುಕಾಡಿ ಹುಚ್ಚ ನಂತಾದ. ಹೀಗೊಂದು ದಿನ ಅಚಾನಕ್ಕಾಗಿ ಅವಳು ಸಿಕ್ಕಿದಳು. ಅವಳನ್ನು ದಿಟ್ಟಿಸಿದ್ದ ಅವನ ನೋಟವಂತೂ ಅವಳನ ನುಂಗುವಂತೆ ಇತ್ತು ಅವನ ದೃಷ್ಟಿ ಅವಳ ಕಾಲಿನತ್ತ ವಾಲಿತು ಆಶ್ಚರ್ಯ ಮನೆಮಾಡಿತ್ತು. ಒಂದು ಕ್ಷಣ ಗಂಟಲು ಒಣಗಿತು, ಮೈ ಬೆವರಿತ್ತು ಹೃದಯವಂತ ಕಂಪಿಸತೊಡಗಿದ ಏನಾಯ್ತು ಅನ್ನುವಷ್ಟರಲ್ಲಿ ಅವನ ನಯನಗಳು ಕಣ್ಣೀರಿನ ಹನಿ ಗಳನ್ನು ತುಂಬಿಕೊಂಡು ಲೀಲಾಜಾಲವಾಗಿ ಹರಿದವು ಸಾವರಿಸಿಕೊಂಡು ಅವಳ ಕುತ್ತಿಗೆಯನ್ನು ನೋಡಿದ್ದ ಅದು ಅದು ತಾಳಿ ಅರಿವಿಗೆ ಬಂತು. ಮತ್ತೆ ದುಃಖ ಉಮ್ಮಳಿಸಿ ಬಂತು. ನಾನು ತಪ್ಪು ಮಾಡಿಬಿಟ್ಟೆ ಹಣೆಯಲ್ಲಿ ಬರೆಯದ ಅವಳು ಹೆಸರನ್ನು ನನ್ನೆದೆಯ ಹೃದಯದಲ್ಲಿ ಕೆತ್ತ್ಹಿ ಬಿಟ್ಟೆ ಜೀವನದಲ್ಲಿ ಮೊದಲ ಬಾರಿ ಪ್ರೀತಿಸಿದೆ ಆರಾಧಿಸಿದೆ ಅದೆಲ್ಲವೂ ನೀರ ಮೇಲಿನ ಗುಳ್ಳೆಯಂತೆ ಮಾಯವಾಯಿತು. ಜೀವನ ನಾಟಕ ರಂಗ ನಾವೆಲ್ಲರೂ ಪಾತ್ರಧಾರಿಗಳಷ್ಟೆ. ಸೂತ್ರದಾರ ಆ ದೇವರು ಎಂದುಕೊಳ್ಳುವಷ್ಟರಲ್ಲಿ ಅವಳು ಅವನನ್ನು ನೋಡಿದ್ದಳು.

ಆಶ್ಚರ್ಯ ಎಂಬಂತೆ ಆ ದಿನ ನೋಡಿದ ನೋಟವೇ ಇಂದು ಕೂಡ ಕಾಣುತ್ತಿದೆ ಅವನೇನಾದರೂ ನನ್ನನ್ನು ಆಸೆ ಪಟ್ಟಿರಬಹುದು ಅಥವಾ ಪ್ರೀತಿಯೆಂಬ ಪಯಣದಲ್ಲಿ ನನ್ನನ್ನು ಹಿಂಬಾಲಿಸಿ ಇರಬಹುದೇ ಪ್ರಶ್ನೆ ಕಾಡಿತ್ತು. ಕಾಲ ಮಿಂಚಿ ಹೋಗಿದೆ ಚಿಂತಿಸಿ ಫಲವಿಲ್ಲ ಬೇಕೆಂದರು ಅವನಿಂದ ಹೋಗುವ ಸ್ಥಿತಿ ನನ್ನದಲ್ಲ ನನಗೂ ಮದುವೆಯ ಬೇಲಿ ಇದೆ ಅಂದು ಕೊಂಡಾಗ ಅವಳ ಗಂಡ ಸುಮಾ ಏನ್ ಮಾಡ್ತಾ ಇದ್ದೀಯಾ ಹೊರಡೋಣವಾ ಸಿನಿಮಾ ನೋಡೋಣ ಎಂದಿದ್ದ…. ಯಾವ ಸಿನಿಮಾ..? ಎಂದು ಪ್ರಶ್ನೆ ಮಾಡಿದ್ದಳು ಅದೇ ಕನಸು ಕಲ್ಲಾಯ್ತು ಮನಸು ಮರುಗಿತ್ತು. ಆ ಮಾತು ಕೇಳಿದಾಗ ಹರೀಶನಿಗೆ ಎದೆಯೇ ಹೊಡೆದು ಹೋದಂತಾಗಿ ತನ್ನ ಕೈಯಿಂದ ಎದೆಗೆ ಹೊತ್ತಿದ್ದ ಅದನ್ನು ಗಮನಿಸಿದ ಆಕೆ ನನ್ನನ್ನು ಕ್ಷಮಿಸಿ ನಾನು ನಿಮ್ಮನ್ನು ಅರ್ಥ ಮಾಡಿಕೊಂಡೆ ಆದರೆ ನಾನು ಅಸಹಾಯಕಳು ಎನ್ನುವ ಭಾವ ಅವಳ ಮೊಗದಲ್ಲಿ ಕಂಡಿತ್ತು. ನಾನು ಅದೃಷ್ಟವಂತ ಅರ್ಥವಾಗ ಬೇಕಾದವರಿಗೆ ನನ್ನ ಮನಸ್ಸು ತಿಳಿಯಿತು ಆ ದೇವರು ಅವಳ ಮೇಲೆ ಪ್ರೀತಿಯನ್ನು ಮೂಡುವಂತೆ ಮಾಡಿ ಅವಳ ಹೆಸರನ್ನು ಮಾತ್ರ ನನ್ನ ಹಣೆ ಮೇಲೆ ಬರಿಲಿಲ್ಲ ನಾನು ನತದೃಷ್ಟ ನೇ ಸರಿ ಎನ್ನುತ್ತಾ ತನ್ನ ಕಣ್ಣನ್ನು ತೆರೆದಿದ್ದ…. ಎದುರಿಗೆ ತಾನು ಬಿಟ್ಟು ಬೇರೆ ಯಾರು ಸುಳಿವಿಲ್ಲದ ನೋಡಿ ಈ ಜೀವನ ದೋಣಿಯಂತೆ ಎನ್ನುತ್ತಾ ಮುಂದೆ ಹೆಜ್ಜೆಹಾಕಿದ್ದ ಅಷ್ಟರಲ್ಲಿ ಒಂದು ಆಟೋರಿಕ್ಷಾ ಅವನೆದುರು ಪಾಸಾಗಿತ್ತು ಕನಸು ಕಲ್ಲಾಯ್ತು ಮನಸು ಮರುಗಿತ್ತು ಎಂಬ ಹಾಡು ಆಟೋದಿಂದ ಕೇಳಿದಾಗ ಇದೇ ಜೀವನ ಎನ್ನುತ್ತಾ ಹೊರಟಿದ್ದ ಅವನ ಸ್ಥಿತಿ ಕಂಡು ಸೂರ್ಯ ತಂಪಿನ ಮಳೆ ಸುರಿಸಿದ .

ರಚನೆ ಎ.ಟಿ. ಮಂಜುನಾಥ.. ಬಾಳೆಲೆ

ಎ.ಟಿ. ಮಂಜುನಾಥ.. ಬಾಳೆಲೆ