ರುಚಿಕರವಾದ ಮಟನ್ ಕೀಮಾ ಮಾಡುವ ವಿಧಾನ

24/11/2020

ಬೇಕಾಗುವ ಸಾಮಾಗ್ರಿಗಳು: ಅರ್ಧ ಕೆಜಿ ಮಟನ್ ಮಾಂಸದ ಚೂರುಗಳು, ಲಿವರ್ 1/4 ಕೆಜಿ, ಈರುಳ್ಳಿ 3, ಬೆಳ್ಳುಳ್ಳಿ 7-8 ಎಸಳು, ಶುಂಠಿ 2 ಇಂಚಿನಷ್ಟು, ಕತ್ತರಿಸಿದ ಹಸಿಮೆಣಸಿನ ಕಾಯಿ 4, ಜೀರಿಗೆ 1 ಚಮಚ, ಕರಿಮೆಣಸಿನಕಾಳು 1 ಚಮಚ, ಚಕ್ಕೆ ಮತ್ತು ಲವಂಗ ( ರುಚಿಗೆ ತಕ್ಕ ಹಾಗೆ), ಕೆಂಪು ಮೆಣಸಿನ ಪುಡಿ 1 ಚಮಚ, ಕೊತ್ತಂಬರಿ 1 ಚಮಚ, ಟೊಮೆಟೊ 1 (ಕತ್ತರಿಸಿದ್ದು), ಮೊಸರು 2 ಚಮಚ
ಕೊತ್ತಂಬರಿ ಸೊಪ್ಪು, ಎಣ್ಣೆ 2 ಚಮಚ, ಪಲಾವ್ ಎಲೆ 1, ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ: ಹಸಿಮಾಂಸದ ಚೂರು, ಲಿವರ್, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು.

ಬೆಳ್ಳುಳ್ಳಿ, ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಶುಂಠಿಯನ್ನು ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.

ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ , ಅದರಲ್ಲಿ ಪಲಾವ್ ಎಲೆಗಳನ್ನು ಹಾಕಿ, ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಉರಿಯಬೇಕು.

ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ ಖೀಮಾ ಮತ್ತು ಲಿವರ್ (ಬೇಯಿಸಿದ ಮಾಂಸ) ಹಾಕಿ 2-3 ನಿಮಿಷ ಮಿಶ್ರ ಮಾಡಬೇಕು. ನಂತರ ಕತ್ತರಿಸಿದ ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಕತ್ತರಿಸಿದ ಟೊಮೆಟೊ, ಕೆಂಪು ಮೆಣಸಿನ ಪುಡಿ ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡ 2-3 ನಿಮಿಷಬೇಯಿಸಬೇಕು.

ನಂತರ 1 ಕಪ್ ನೀರು ಸೇರಿಸಿ ಮಿಶ್ರ ಮಾಡಿ, ಪಾತ್ರೆಯ ಬಾಯಿ ಮುಚ್ಚಿ 7-10 ನಿಮಿಷ ಬೇಯಿಸಬೇಕು.

ನಂತರ 2 ಚಮಚ ಮೊಸರು ಹಾಕಿ ಪುನಃ2-5 ನಿಮಿಷ ಬೇಯಿಸಬೇಕು. ಈ ಮಟನ್ ಖೀಮಾವನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಮಟನ್ ಲಿವರ್ ಕೀಮಾ ರೆಡಿ.