ಅರಣ್ಯ ಹಕ್ಕು ಕಾಯ್ದೆ : ಅರ್ಜಿಗಳ ಶೀಘ್ರ ವಿಲೇವಾರಿಗೆ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಸೂಚನೆ

24/11/2020

ಮಡಿಕೇರಿ ನ.24 : ಅರಣ್ಯ ಹಕ್ಕು ಅರ್ಜಿ ಶೀಘ್ರವಾಗಿ ಇತ್ಯರ್ಥ ಪಡಿಸಲು ಸೂಕ್ತ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾ.ಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ ಅವರು ಸೂಚಿಸಿದರು.
ನಗರದ ತಾ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಡಿಕೇರಿ ತಾಲ್ಲೂಕಿನಲ್ಲಿ ಅರಣ್ಯ ಹಕ್ಕು ಅಧಿನಿಯಮದಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮಧ್ಯಂತರ ಆದೇಶದನ್ವಯ ತಿರಸ್ಕøತ ಕ್ಲೈಮುಗಳ ಪುನರ್ ಪರೀಶೀಲನಾ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂಧು ಅವರು ಹೇಳಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರು ಮಾತನಾಡಿ ನೀಡಿದರು ಮಡಿಕೇರಿ ತಾಲ್ಲೂಕಿನಲ್ಲಿ ಪರಿಶಿಷ್ಟ ಪಂಗಡದ 347 ಮತ್ತು ಇತರೆ ಜನಾಂಗದ 610 ಅರ್ಜಿಗಳು ಸ್ವೀಕೃತಗಂಡಿದ್ದು, ಈ ಪೈಕಿ ಪರಿಶಿಷ್ಟ ಪಂಗಡದ 218 ಕ್ಲೈಮುಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ತಿರಸ್ಕøತ ಕ್ಲೈಮುಗಳ ಪುನರ್ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿರುತ್ತದೆ. ಈವರೆಗೆ ತಿರಸ್ಕøತಗೊಂಡ ಪರಿಶಿಷ್ಟ ಪಂಗಡದ 129 ಅರ್ಜಿಗಳಲ್ಲಿ 110 ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಲಾಗಿದ್ದು, ಇವುಗಳಲ್ಲಿ 30 ಕ್ಲೈಮುಗಳನ್ನು ಅಂಗೀಕರಿಸಲಾಗಿದೆ. ಉಳಿದಂತೆ 482 ಕ್ಲೈಮುಗಳನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು.
ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿ ರಚಿಸಿ ಕ್ಲೈಮುಗಳನ್ನು ಸ್ವೀಕರಿಸಿರುವ 12 ಗ್ರಾಮ ಪಂಚಾಯತಿಗಳ ಪೈಕಿ 11 ಗ್ರಾಮ ಪಂಚಾಯಿತಿಗಳಲ್ಲಿ ತಿರಸ್ಕøತ ಕ್ಲೈಮುಗಳ ಪುನರ್ ಪರಿಶೀಲನೆ ಪೂರ್ಣಗೊಂಡಿದೆ. ಉಳಿದಂತೆ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶೀಷ್ಟ ಪಂಗಡದ 19 ಮತ್ತು ಇತರೆ ಜನಾಂಗದ 98 ಕ್ಲೈಮುಗಳು ಸೇರಿದಂತೆ ಒಟ್ಟು 117 ಕ್ಲೈಮುಗಳ ಪುನರ್ ಪರಿಶೀಲನಾ ಬಾಕಿ ಇರುತ್ತದೆ ಎಂದು ಅವರು ಮಾಹಿತಿ ನೀಡಿದರು.
ತಾ.ಪಂ.ಸದಸ್ಯರಾದ ನಾಗೇಶ ಕುಂದಲ್ಪಾಡಿ ಅವರು ಮಾತನಾಡಿ ಬಾಕಿ ಇರುವ ಕ್ಲೈಮುಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು ಎಂದು ಹೇಳಿದರು.
ಪಶುಪಾಲನಾ ಇಲಾಖೆಯ ದಯಾನಂದ ಅವರು ಮಾತನಾಡಿ ಆ್ಯಸಿಲ್ ಕೋಳಿ ಸಾಕಾಣಿಕೆ ಮಾಡಲು ಕೋಳಿ ಉತ್ಪನ್ನ ಮಾರಾಟ ಸಹಕಾರ ಸಂಘ ಬೆಂಗಳೂರು ಇವರು 52 ಸಾವಿರಗಳ ಸಾಲ ಒದಗಿಸುತ್ತಿದ್ದು, ಸಾಮಾನ್ಯ ವರ್ಗದವರಿಗೆ 26 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 47 ಸಾವಿರಗಳ ಸಹಾಯ ಧನ ನೀಡಲಾಗುತ್ತದೆ. ಕೋಳಿ ಸಾಕಾಣಿಕೆ ಫಲಾನುಭವಿಗಳಿಗೆ ಸಹಾಯ ಧನದ ಜೊತೆಗೆ ಕೋಳಿ ಮನೆ ಹಾಗೂ 22 ವಾರದ 20 ಕೋಳಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಫಲಾನುಭವಿಗಳ ಆಯ್ಕೆ ಮಾಡಿ ವರದಿಯನ್ನು ಸಹಾಯಕ ನಿರ್ದೇಶಕರು ಪಶುಪಾಲನಾ ಇಲಾಖೆ ಮಡಿಕೇರಿ ಇವರಿಗೆ ಸಲ್ಲಿಸುವಂತೆ ಗ್ರಾಮ ಪಂಚಾಯತ್ ಪಿಡಿಓ ಗಳಿಗೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಾ.ಪಂ.ಇಒ ಲಕ್ಷ್ಮಿ ಅವರು ಮಾತನಾಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತಾ.ಪಂ ಸದಸ್ಯರಾದ ನಾಗೇಶ್ ಕುಂಲ್ಪಾಡಿ ಅವರು ಮಾತನಾಡಿ ಅರ್ಹ ಫಲಾನಿಭವಿಗಳಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಇದರಿಂದ ಅರ್ಹರು ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಹಾಗೂ ಮಧ್ಯ ವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಾ.ಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ ಅವರು ಮಾತನಾಡಿ ಸೂಕ್ತ ಹಾಗೂ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ಒದಗಿಸಬೇಕು. ಹಾಗೂ ನಿಯಮಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳ ಕುರಿತಂತೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ತಾ.ಪಂ.ಉಪಾಧ್ಯಕ್ಷರಾದ ಬೊಳಿಯಾಡಿರ ಸಂತು ಸುಬ್ರಮಣಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಧರ್, ಮಡಿಕೇರಿ ತಹಶೀಲ್ದಾರ ಮಹೇಶ್, ತಾ.ಪಂ.ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.