ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸೌರಭ ಕಾರ್ಯಕ್ರಮ

November 24, 2020

ಮಡಿಕೇರಿ ನ.24 : ಕಲೆ, ಸಂಸ್ಕøತಿ ಸಾಹಿತ್ಯದ ಸದಭಿರುಚಿಯನ್ನು ವಿದ್ಯಾರ್ಥಿ ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ “ ಯುವ ಸೌರಭ” ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ನಾಡಿನ ಜನರು ಶಿಕ್ಷಣದಿಂದ ವಂಚಿತರಾದರೂ ಕಲೆಯನ್ನು ಮಾತ್ರ ಕರಗತ ಮಾಡಿಕೊಂಡು ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರು.
ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಜಿ.ಮಂದಪ್ಪ ಅವರು ಕಲೆ ಮತ್ತು ಸಂಸ್ಕøತಿ ನಮ್ಮ ದೇಶದ ಶ್ರೀಮಂತ ಆಸ್ತಿ ಹಿಂದಿನ ತಲೆಮಾರಿನಿಂದ ನಮ್ಮ ಸಂಸ್ಕøತಿಯನ್ನು ಹಿರಿಯರು ಉಳಿಸಿಕೊಂಡು ಬಂದಿದ್ದಾರೆ ಎಂದರು.
ಡಿ.ಚೆನ್ನಮ್ಮ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷರಾದ ಕರ್ನಲ್ ಬಿ.ಜಿ.ವಿ.ಕುಮಾರ್ ಅವರು ಮಾತನಾಡಿ ನಮ್ಮ ಬದುಕು ಸುಂದರವಾಗಿರಬೇಕೆಂದರೆ ಕಲೆಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಸಿ.ಆರ್.ಪಿ.ಮದಾಪುರ ಕ್ಲಸ್ಟರ್ ಬಿ.ಎನ್.ವಸಂತಕುಮಾರ್ ಭಾರತೀಯ ಸಂಸ್ಕøತಿ ಅಪಾರವಾದುದು. ಸರ್ಕಾರದ ಮೂಲಕ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷ. ಗ್ರಾಮೀಣ ಕಲೆ ಸಂಸ್ಕøತಿ ಉಳಿಯಲಿ ಮುಂದಿನ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ಮಾದರಿಯಾಗಲಿ ಎಂದರು.
ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಎನ್.ಎ.ರೇವತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಅವರು ಮಾತನಾಡಿದರು.
ಎಚ್.ಅರ್.ಬಸವರಾಜ್, ಬಿ.ಸಿ.ಶಂಕರಯ್ಯ ಹಾಜರಿದ್ದರು. ಕಾರ್ಯಕ್ರಮದಲ್ಲಿ ಹರಿಕಥೆ, ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಗಾಯನ, ಸಮೂಹ ನೃತ್ಯ, ಡೊಳ್ಳುಕುಣಿತ, ಕಂಸಾಳೆ, ಸುಗಮ ಸಂಗೀತ, ಜನಪದ ಗೀತಾಗಾಯನ, ನೃತ್ಯ ವೈಭವ, ಜಾನಪದ ನೃತ್ಯ, ವಚನ ಗಾಯನ ಹತ್ತು ಹಲವು ಕಾರ್ಯಕ್ರಮ ನಡೆಯಿತು.

error: Content is protected !!