ಬೈಕ್‍ನಿಂದ ಬಿದ್ದು ವ್ಯಕ್ತಿ ಸಾವು : ಸೀಗೆಹೊಸೂರು ಗ್ರಾಮದಲ್ಲಿ ಘಟನೆ

24/11/2020

ಮಡಿಕೇರಿ ನ.24 : ಬೈಕ್‍ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸೀಗೆಹೊಸೂರು ಗ್ರಾಮದಲ್ಲಿ ನಡೆದಿದೆ.
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿ ಪ್ರಭಾಕರ್ (45) ಮೃತ ದುರ್ದೈವಿ. ಸ್ನೇಹಿತನ ಬೈಕ್‍ನ ಹಿಂಬದಿಯಲ್ಲಿ ಕುಳಿತುಕೊಂಡು ತೆರಳುತ್ತಿದ್ದ ಸಂದರ್ಭ ಸೀಗೆಹೊಸೂರು ಗ್ರಾಮದ ಹತ್ತಿರ ಬೈಕ್ ನೆಲಕ್ಕುರುಳಿದ ಪರಿಣಾಮ ಪ್ರಭಾಕರ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಕುಶಾಲನಗರ ಗ್ರಾಮಾಂತರ POLICE ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.