43 ಆಪ್ ಗಳನ್ನು ಬ್ಯಾನ್ ಮಾಡಿದ ಸರ್ಕಾರ

25/11/2020

ನವದೆಹಲಿ ನ.25 : ರಾಷ್ಟ್ರೀಯ ಭದ್ರತೆ, ಗ್ರಾಹಕ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಣೆಯ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ 43 ಆಪ್ ಗಳನ್ನು ಬ್ಯಾನ್ ಮಾಡಿದೆ.
ಲಡಾಕ್ ಮತ್ತು ಗಲ್ವಾನ್ ಕಣಿವೆಯ ಗಡಿ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಹಳಸಿದೆ. ಚೀನಾಗೆ ಬುದ್ಧಿ ಕಲಿಸುವ ಸಲುವಾಗಿ ಕೇಂದ್ರ ಸರ್ಕಾರ ಚೀನಾ ಮೂಲದ ಸರಕುಗಳನ್ನು ಮಾತ್ರವಲ್ಲದೆ, ಆಪ್, ಡಿಜಿಟಲ್ ಸೇವೆಗಳನ್ನು ಕೂಡ ಹಂತಹಂತವಾಗಿ ನಿಷೇಧಿಸುತ್ತಿದೆ.
ಕೇಂದ್ರ ಸರ್ಕಾರ ಇಲ್ಲಿಯವರೆಗೂ ಚೀನಾದ ಒಟ್ಟು 228 ಆಪ್ ಗಳನ್ನು ಬ್ಯಾನ್ ಮಾಡಿದ್ದು ಇದೀಗ ಮತ್ತೆ 43 ಆಪ್ ನ್ನು ನಿಷೇಧಿಸಿದೆ.