ನ.26 ರಂದು ಸಿ.ಎನ್.ಸಿ ಯಿಂದ ಕೊಡವ ರಾಷ್ಟ್ರೀಯ ದಿನ ಆಚರಣೆ

25/11/2020

ಮಡಿಕೇರಿ ನ. 25 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನ. 26 ರಂದು 30ನೇ ವರ್ಷದ ಕೊಡವ ರಾಷ್ಟ್ರೀಯ ದಿನವನ್ನು ಆಚರಿಸಲಾಗುವುದು ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಕಡಗದಾಳಿನ ಕ್ಯಾಪಿಟಲ್ ವಿಲೇಜ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡವ ಬುಡಕಟ್ಟು ಕುಲಕ್ಕಾಗಿ, ಭೂರಾಜಕೀಯ ಸ್ವಾಯತ್ತತೆಗಾಗಿ ಹಾಗೂ ಇತರ ಬೇಡಿಕೆಗಳ ಪೂರೈಕೆಗೆ ಸಿ.ಎನ್.ಸಿ ಸತತ ಹೋರಾಟ ನಡೆಸುತ್ತಿದ್ದು, ಈ ಕುರಿತು ಅಂದು ವಿಚಾರ ವಿನಿಮಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ರಾಜ್ಯ ಸಭಾ ಸಂಸದ ಬಿ.ಕೆ ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ ಹಾಗೂ ಕೊಡಗು ಮೈಸೂರು ಕ್ಷೇತ್ರದ ಮಾಜಿ ಸಂಸದ ಹೆಚ್.ವಿಶ್ವನಾಥ್ ಹಾಗೂ ಮಾಜಿ ರಾಜ್ಯಸಭಾ ಸಂಸದ ಡಿ.ಕುಪೇಂದ್ರ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಎನ್.ಯು. ನಾಚಪ್ಪ ತಿಳಿಸಿದರು.