ಕಡಗದಾಳಿನಲ್ಲಿ ಪೊವ್ ಕೆ.ಪಿ.ಎಲ್ ಕ್ರಿಕೆಟ್ : ನೀರುಕೊಲ್ಲಿಯ ಓಫಿಸಿಯಲ್ ಕ್ರಿಕೆಟರ್ಸ್ ತಂಡ ಪ್ರಥಮ

25/11/2020

ಮಡಿಕೇರಿ ನ. 24 : ಯುವಕರ ಪ್ರತಿಭೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಡಗದಾಳು ಪಂ. ವ್ಯಾಪ್ತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಕೆಪಿಎಲ್ ಕ್ರಿಕೆಟ್ ಲೀಗ್ ಏರ್ಪಡಿಸಲಾಗಿದ್ದು, ಪ್ರಥಮ ಸ್ಥಾನವನ್ನು ನೀರುಕೊಲ್ಲಿಯ ಓಫಿಸಿಯಲ್ ಕ್ರಿಕೆಟರ್ಸ್ ಪಡೆದುಕೊಂಡರೆ, ಟೀಮ್ ವಿರಾಟ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಒಟ್ಟು ಐದು ಫ್ರ್ಯಾಂಚೈಸ್‍ಗಳಾದ ಮುಸ್ತಫಾ ಕತ್ತಲೆಕಾಡು (ರಾಯಲ್ ಸ್ಟೈಕರ್ಸ್), ರಾಹುಲ್ ಕಡಗದಾಳು (ಆರ್, ಕೆ ಸ್ಮಸರ್ಸ್), ರಂಜಿತ್, ಕೀರ್ತನ್ (ಟೀಮ್ ಲೂಸರ್ಸ್), ದೀಪಕ್ ರೈ ( ಟೀಮ್ ವಿರಾಟ್), ವಿಜು ಕಾರ್ಯಪ್ಪ (ಓಫಿಸಿಯಲ್ ಕ್ರಿಕೆಟರ್ಸ್) ಮಾಲಿಕತ್ವದಲ್ಲಿ ಒಟ್ಟು 60 ಆಟಗಾರನ್ನು ಬಿಡ್ಡಿಂಗ್ ಮೂಲಕ ಐದು ತಂಡಗಳಾಗಿ ಆಯ್ಕೆಮಾಡಲಾಯಿತು.
ಪಂದ್ಯಾಟಕ್ಕೆ ಮುಖ್ಯ ಪ್ರಯೋಜಕರಾದ ಪೆÇವ್‍ನ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕರಾದ ಜಯಪ್ರಕಾಶ್ ಶೆಟ್ಟಿ, ನಾಗೇಶ್ ಕಾಲೂರ್, ನಾಸರ್ ಕತ್ತಲೆಕಾಡು, ಶಂಭಯ್ಯ ಕಡಗದಾಳು, ಯೂಸೂಪ್ ಕಡಗದಾಳು, ಆನಂದ ಚಾಲನೆ ನೀಡಿದರು.
ಒಟ್ಟು 8 ಲೀಗ್ ಪಂದ್ಯಾಟದಲ್ಲಿ ಟೀಮ್ ವಿರಾಟ್ ತಂಡ ನೇರವಾಗಿ ಪೈನಲ್‍ಗೆ ಲಗ್ಗೆ ಇಟ್ಟಿತ್ತು. ಓಫಿಸಿಯಲ್ ಕ್ರಿಕೆಟರ್ಸ್ ಮತ್ತು ರಾಯಲ್ ಸ್ಟೈಕರ್ಸ್ ತಂಡದ ನಡುವೆ ನಡೆದ ಸೆಮಿಫೈನಲ್ಸ್ ಪಂದ್ಯದಲ್ಲಿ ಓಫಿಸಿಯಲ್ ಕ್ರಿಕೆಟರ್ಸ್ ತಂಡ 5 ರನ್‍ಗೆ ಜಯದ ಮೂಲಕ ಪೈನಲ್‍ಗೆ ಅರ್ಹತೆ ಪಡೆಯಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಟೀಮ್ ವಿರಾಟ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಓಫಿಸಿಯಲ್ ಕ್ರಿಕೆಟರ್ಸ್ ತಂಡ ನಿಗದಿತ 4 ಓವರ್ ಗೆ 6 ವಿಕೆಟ್ ನಷ್ಟಕ್ಕೆ 35ರನ್ ನ ಗುರಿನೀಡಿತು.
36 ರನ್ ಗುರಿ ಬೆನ್ನಟ್ಟಿದ ಟೀಮ್ ವಿರಾಟ್ ತಂಡ 30ರನ್ ಹೊಡೆದು ಗುರಿತಲುಪುವಲ್ಲಿ ವಿಫಲವಾಯಿತು.

ಬೆಸ್ಟ್ ಬ್ಯಾಟ್ಸ್‍ಮನ್ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಓಫಿಸಿಯಲ್ ಕ್ರಿಕೆಟರ್ಸ್ ತಂಡದ ಕಿಶನ್ ಪಡೆದು ಕೊಂಡರು. ಬೆಸ್ಟ್ ಬೌಲರ್ ಆಗಿ ಓಫಿಸಿಯಲ್ ಕ್ರಿಕೆಟರ್ಸ್ ತಂಡದ ಕಿಶೋರ್ ಪಡೆದರು.

ಉತ್ತಮ ಕ್ಷೇತ್ರರಕ್ಷಕನಾಗಿ ಟೀಮ್ ವಿರಾಟ್ ತಂಡದ ಸುಜಿನ್ ಪಡೆದರು. ಮೋಸ್ಟ್ ವ್ಯಾಲ್ಯುಯಬಲ್ ಆಟಗಾರನಾಗಿ ರಾಯಲ್ ಸ್ಟೈಕರ್ಸ್ ತಂಡದ ಜಯಂತ್ ಪಡೆದುಕೊಂಡರು. ಉದಯೋನ್ಮುಖ ಆಟಗಾರನಾಗಿ ಓಫಿಸಿಯಲ್ ಕ್ರಿಕೆಟರ್ಸ್ ತಂಡದ ಮೋಹನ್ ಕುಮಾರ್ ಪಡೆದು ಕೊಂಡರು.
ಅರ್ಧ ಶತಕವನ್ನು ಬಾರಿಸಿದ ಆರ್. ಕೆ. ಸ್ಮಸರ್ಸ್ ತಂಡದ ಕುಮಾರ್ ಸ್ಪರ್ಟನ್ ಬ್ಯಾಟ್ ಪಡೆದರು.