ಮಡಿಕೇರಿ ಸಾಮಾಜಿಕ ಅರಣ್ಯ ವಿಭಾಗದ ಎಸಿಎಫ್ ಆಗಿ ಎಂ.ಎಸ್.ಚಂಗಪ್ಪ ನೇಮಕ

November 25, 2020

ಮಡಿಕೇರಿ ನ. 25 : ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಎಸ್.ಚಂಗಪ್ಪ, ಕೊಡಗು ಜಿಲ್ಲಾ ಮಡಿಕೇರಿ ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದಾರೆ.

ಇವರು ಪ್ರಸ್ತುತ ಮಡಿಕೇರಿ ಅರಣ್ಯ ವಿಭಾಗದ ಸರ್ವೇ ಘಟಕದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದು, ಈ ಹಿಂದೆ ಭಾಗಮಂಡಲ, ಸುಳ್ಯ, ಪುಷ್ಪಗಿರಿ ವನ್ಯ ಜೀವಿ ವಲಯ ಹಾಗೂ ಕೊಳ್ಳೆಗಾಲ ಅರಣ್ಯ ವಿಭಾಗದಲ್ಲಿ ವಲಯಾರಣ್ಯಾಧಿಕಾರಿಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರು ಮೂಲತಃ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಸುಬ್ಬಯ್ಯ ಮತ್ತು ಚೊಂದಮ್ಮ ಅವರ ಪುತ್ರರಾಗಿರುತ್ತಾರೆ.

error: Content is protected !!