ಡಿಕೆಶಿಗೆ ಸಿಬಿಐ ವಿಚಾರಣೆಯಿಂದ ವಿನಾಯಿತಿ

26/11/2020

ಬೆಂಗಳೂರು ನ.26 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ವಿಚಾರಣೆಯಿಂದ ವಿನಾಯಿತಿ ನೀಡಿದೆ.
ಇಂದು ಸಂಜೆ 3.55ಕ್ಕೆ ಸಿಬಿಐ ಕಚೇರಿಗೆ ಡಿಕೆ ಶಿವಕುಮಾರ್ ಹಾಜರಾದರು. ಈ ವೇಳೆ ಡಿಕೆಶಿ ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್ ಅಂತ್ಯಸಂಸ್ಕಾರಕ್ಕೆ ತೆರಳಬೇಕು. ಹೀಗಾಗಿ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದರು. ಸುಮಾರು 45 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಡಿಕೆಶಿ ಮನವಿಯನ್ನು ಪುರಸ್ಕರಿಸಿ ವಿಚಾರಣೆಯಿಂದ ವಿನಾಯಿತಿ ನೀಡಿದರು. ಇಂದು ರಾತ್ರಿಯಿಂದ ನವೆಂಬರ್ 29 ಭಾನುವಾರದ ತನಕ ಡಿಕೆ ಶಿವಕುಮಾರ್ ಕಾರ್ಯಕ್ರಮವನ್ನು ನಿಗದಿ ಮಾಡಿದ್ದಾರೆ. ಇಂದು ಗುಜರಾತಿನ ವಡೋದರಕ್ಕೆ ರಾತ್ರಿ 7ಕ್ಕೆ ವಿಶೇಷ ವಿಮಾನದಲ್ಲಿ ತೆರಳಲಿರುವ ಡಿಕೆಶಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಡಿಕೆಶಿ ಗುರುವಾರ ಅಹಮದ್ ಪಟೇಲ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.