ಪಂಜಾಬ್‍ನಲ್ಲಿ ರಾತ್ರಿ ಕಫ್ರ್ಯೂ ಜಾರಿ

26/11/2020

ಚಂಡಿಗಢ ನ.26 : ರಾಜ್ಯದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ನಿಯಂತ್ರಿಸುವುದಕ್ಕಾಗಿ ಡಿ.1ರಿಂದ ರಾತ್ರಿ ಕಫ್ರ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಆರಂಭವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಡಿಸೆಂಬರ್ 1ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕಫ್ರ್ಯೂ ಜಾರಿಗೊಳಿಸಲಾಗುತ್ತಿದೆ ಎಂದು ಅಮರಿಂದರ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಜಾಬ್‍ನ ಎಲ್ಲಾ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ವಿವಾಹದ ಸ್ಥಳಗಳನ್ನು ಡಿಸೆಂಬರ್ 1 ರಿಂದ ರಾತ್ರಿ 9.30ಕ್ಕೆ ಬಂದ್ ಆಗಲಿವೆ. ಡಿಸೆಂಬರ್ 15ರಂದು ಕಫ್ಯೂ ಮುಂದುವರೆಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.