ಸೋಮವಾರಪೇಟೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ದಿನ ಆಚರಣೆ

26/11/2020

ಮಡಿಕೇರಿ ನ. 26 : ಸಂವಿಧಾನ ದಿನದ ಅಂಗವಾಗಿ ಸೋಮವಾರಪೇಟೆಯ ವೆಂಕಟೇಶ್ವರ ಬ್ಲಾಕ್‍ನಲ್ಲಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಸೋಮವಾರಪೇಟೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್ ಮಾತನಾಡಿ, ಪ್ರಜಾಪ್ರಭುತ್ವದ ಮೂಲಾಧಾರವೇ ಈ ದೇಶದ ಸಂವಿಧಾನ. ಭಾರತ ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆಯನ್ನು ಕಲ್ಪಿಸಿರುವುದನ್ನು ಮರೆಯಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ರವಿ ಅಜ್ಜಳ್ಳಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಜನಾರ್ದನ್, ಖಜಾಂಚಿ ಎಸ್.ಎ. ಪ್ರತಾಪ್, ಸದಸ್ಯ ಶ್ರೀಧರ್, ಪದಾಧಿಕಾರಿಗಳಾದ ಗಿರೀಶ್ ಶಾಂತಳ್ಳಿ, ಇಂದ್ರೇಶ್ ಕೊಡ್ಲಿಪೇಟೆ ಇದ್ದರು.