ಮಡಿಕೇರಿ ಲಯನ್ಸ್ ಸಂಸ್ಥೆಯಿಂದ ಜೀವನ ದಾರಿ ಅನಾಥ ಆಶ್ರಮಕ್ಕೆ ದಿನಸಿ ಕಿಟ್ ವಿತರಣೆ

November 26, 2020

ಸುಂಟಿಕೊಪ್ಪ,ನ.26: ವಿಕಾಸ್ ಜನಾಸೇವಾ ಟ್ರಸ್ಟಿನ ಜೀವನ ದಾರಿ ಅನಾಥ ಆಶ್ರಮದ ನಿವಾಸಿಗಳಿಗೆ ಮಡಿಕೇರಿ ಲಯನ್ಸ್ ಸಂಸ್ಥೆ ವತಿಯಿಂದ ಆಹಾರದ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ನೀಡಿದರು.
ಈ ಸಂದರ್ಭ ಲಯನ್ಸ್ ಸಂಸ್ಥೆ ಲಯನ್ ಅನಿತಾ ಸೋಮಣ್ಣ, ಕಾರ್ಯದರ್ಶಿಗಳಾದ ಲಯನ್ ಕವಿತಾ ಕಾವೇರಮ್ಮ, ಲಯನ್ಸ್ ವೃತ್ತಿ ತರಬೇತಿ ಕೇಂದ್ರದ ಟ್ರಸ್ಟ್ ಅಧ್ಯಕ್ಷರಾದ ಅಂಬೆಕಲ್ ನವೀನ್ ಪ್ರಧಾನ ಕಾರ್ಯದರ್ಶಿ ಕೆ.ಮಧುಕರ್, ನಿರ್ಧೆಶಕರಾದ ಗೀತಾ ಮಧುಕರ್ ಹಾಗೂ ವಿಕಾಸ್ ಜನಾಸೇವಾ ಟ್ರಸ್ಟಿನ ಜೀವನ ದಾರಿ ಅನಾಥ ಆಶ್ರಮದ ಅಧ್ಯಕ್ಷ ರಮೇಶ ಆಶ್ರಮ ವಾಸಿಗಳು ಹಾಜರಿದ್ದರು.

error: Content is protected !!