ಕೆದಕಲ್ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಅಭಿಯಾನ

26/11/2020

ಸುಂಟಿಕೊಪ್ಪ,ನ.26: ಕರ್ನಾಟಕ ರಾಜ್ಯ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೊಡಗು ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೆದಕಲ್ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಮಟ್ಟದ ಪೋಷಣ ಅಭಿಯಾನವನ್ನು ಆಯೋಜಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ಕಿರಿಯ ಆರೋಗ್ಯ ಸಹಾಯಕಿಯಾದ ಕಾಂತಿಮಣಿ ಅವರು ಉದ್ಘಾಟಿಸಿ ಮಾತನಾಡಿದ ಮಗು ಮತ್ತು ಮಕ್ಕಳ ಹಾರೈಕೆ ಬಗ್ಗೆ ಪೋಷಕರ ಪಾತ್ರವು ಮಹತ್ತರದ್ದಾಗಿದೆ. ಪೋಷಕರು ತಾಯಿ ಎದೆಹಾಲು ಮಗುವಿಗೆ ಬೆಳವಣಿಗೆಗೆ ಅತಿಮುಖ್ಯವಾಗಿದೆ, ಮಕ್ಕಳಿಗೆ ಪ್ರೋಟಿನ್‍ಯುಕ್ತ ಆಹಾರ ನೀಡುವುದರಿಂದ ಶಿಶುಗಳ ಆರೋಗ್ಯ ವೃದ್ಧಿಸುತ್ತದೆ. ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.
ಹಾಲೇರಿ, ಹೊರೂರು, ಮೊದೂರು ಹಾಗೂ ಕೆದಕಲ್ ಗ್ರಾಮ ವ್ಯಾಪ್ತಿಯ 2019-20ನೇ ಸಾಲಿನ ಬಿಇಸಿ ಮತ್ತು ಬಿಸಿಸಿಯ ಪೋಷಣ ಅಭಿಯಾನ, ಕಾರ್ಯಕ್ರಮದ ಅಂಗವಾಗಿ ಅನ್ನ ಪ್ರಶಾಣ,ಅಕ್ಷರಾಭ್ಯಾಸ ಮತ್ತು ಆರೋಗ್ಯವಂತ ಮಕ್ಕಳ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯಾರಾದ ನಳಿನಿ, ಮಂಜುಳ, ಶೋಭ, ಬಿಂದು, ಆಶಾ ಕಾರ್ಯಕರ್ತೆಯರಾದ ನಿರ್ಮಲ,ಗೀತಾ ಅಂಗನವಾಡಿ ಸಹಾಯಕಿಯರು ಇದ್ದರು.
ಸಭೆಯಲ್ಲಿ ಮಕ್ಕಳ ತಾಯಂದಿರು, ಮಕ್ಕಳು, ಗರ್ಭಿಣಿಯರು,ಬಾಣಂತಿಯರು ಪಾಲ್ಗೊಂಡಿದ್ದರು.
ಮಕ್ಕಳಿಗೆ ಅಕ್ಷರಭ್ಯಾಸ, ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯತು.
ಸಮಾರಂಭದ ಮೊದಲಿಗೆ ಮಂಜುಳ ಸ್ವಾಗತಿಸಿ, ನಳಿನಿ ನಿರೂಪಿಸಿ ಹಾಗೂ ಶೋಭ ವಂದಿಸಿದರು.