ಸಣ್ಣಪುಲಿಕೋಟಿನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

November 26, 2020

ಮಡಿಕೇರಿ ನ.26 : ಭಾಗಮಂಡಲ ಸಮೀಪದ ಸಣ್ಣಪುಲಿಕೋಟು ಕುಯ್ಯಮುಡಿ ಕಡೋಡಿ ದೇವಸ್ಥಾನ ಸಮೀಪದ ಗಣೇಶ್ ಎಂಬವರ ಮನೆಯ ಹತ್ತಿರ ಒಂದು ವಾರದಿಂದ ಇದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮೂರ್ನಾಡಿನ ಸ್ನೇಕ್  ಪ್ರಜ್ವಲ್ ಗುರವಾರ ಸೆರೆ ಹಿಡಿಯವಲ್ಲಿ ಯಶಸ್ವಿಯಾದರು. ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಸ್ಥಳದಲ್ಲಿ ಕುಯ್ಯಮುಡಿ ಕುಟುಂಬಸ್ಥರಿದ್ದರು.