ಕೊಡಗು ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ : ಪ್ರತಿಜ್ಞಾ ವಿಧಿ ಸ್ವೀಕಾರ

26/11/2020

ಮಡಿಕೇರಿ ನ.26 : ಸಂವಿಧಾನ ದಿನ ಪ್ರಯುಕ್ತ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಭಾರತ ದೇಶದ ಪ್ರಜೆಗಳಾದ ನಾವು ರಾಷ್ಟ್ರವನ್ನು ಸಾರ್ರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಬದ್ಧರಾಗಿರಬೇಕು ಎಂದರು.
ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನ ಸ್ವತಂತ್ರ, ಸ್ಥಾನ ಮಾನ ಹಾಗೂ ಸಮಾನತೆ ದೊರೆಯುವಂತೆ ಮಾಡಲು ಶ್ರಮಿಸಬೇಕು.
ವ್ಯಕ್ತಿ ಗೌರವ, ರಾಷ್ಟ್ರದ ಏಕತೆ, ಹಾಗೂ ಅಖಂಡತೆಯನ್ನು ಕಾಪಾಡುವುದು. ಭ್ರಾತೃತ್ವ ಭಾವನೆ ವೃದ್ಧಿಗೊಳಿಸಲು ಸಂಕಲ್ಪ ಮಾಡುವಂತಾಗಬೇಕು ಎಂದು ಅವರು ಬೋಧಿಸಿದರು.
1949ರ ನವೆಂಬರ್, 26 ರಂದು ಸಂವಿಧಾನವನ್ನು ಅರ್ಪಿಸಿಕೊಂಡಿದ್ದೇವೆ ಎಂದು ಪ್ರತಿಜ್ಞಾ ವಿಧಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಬೋಧಿಸಿದರು. ನಾನಾ ಇಲಾಖೆ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.