ಕಾರ್ಮಿಕರ ರಾಜ್ಯ ವಿಮಾ ಯೋಜನೆಯಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ

November 27, 2020

ಮಡಿಕೇರಿ ನ.26 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಸಂಸ್ಥೆಯಲ್ಲಿ ಕಾರ್ಮಿಕರ ರಾಜ್ಯ ವಿಮಾ ಯೋಜನೆಯಲ್ಲಿ (ಇಎಸ್‍ಐ) ನೋಂದಣಿಯಾಗಿರುವ ವಿಮಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಯೋಜನೆಯಡಿ ಆಸ್ಪತ್ರೆಗೆ ಬರುವವರು ಚಿಕಿತ್ಸೆಗಾಗಿ ನೋಂದಾಯಿಸುವ ಸಂದರ್ಭದಲ್ಲಿ ಅಗತ್ಯವಿರುವ ದಾಖಲೆಗಳಾದ ಇಎಸ್‍ಐ ನೋಂದಣಿ ಕಾರ್ಡ್, ಆಧಾರ್ ಪ್ರತಿ, ಇಎಸ್‍ಐ ಆಸ್ಪತ್ರೆಯಿಂದ ರೆಫರಲ್ ಪ್ರತಿ ದಾಖಲೆಗಳನ್ನು ಒದಗಿಸಿ ಉಚಿತ ಚಿಕಿತ್ಸಾ ಸೌಲಭ್ಯ ಯೋಜನೆಯನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಕಾರ್ಯಪ್ಪ ಅವರು ತಿಳಿಸಿದ್ದಾರೆ.

error: Content is protected !!