ಪ್ರಗತಿಪರ ಸಂವಿಧಾನವೇ ಬಹುದೊಡ್ಡ ಶಕ್ತಿ

27/11/2020

ನವದೆಹಲಿ ನ.27 :ಸಂವಿಧಾನ ದಿನ ಅಂಗವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತದ ಏಕತೆ ಮತ್ತು ಅಭಿವೃದ್ಧಿಗೆ ನಮ್ಮ ಪ್ರಗತಿಪರ ಸಂವಿಧಾನವೇ ಬಹುದೊಡ್ಡ ಶಕ್ತಿ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಸಂವಿಧಾನ ದಿನದಂದು, ನಾನು ಭಾರತೀಯ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅವರಿಗೆ ವಂದಿಸುತ್ತೇನೆ. ನಮ್ಮ ಪ್ರಗತಿಪರ ಸಂವಿಧಾನ ಭಾರತದ ಏಕತೆ ಮತ್ತು ಅಭಿವೃದ್ಧಿಗೆ ಬಹುದೊಡ್ಡ ಶಕ್ತಿಯಾಗಿದೆ ಎಂದಿದ್ದಾರೆ.
ದೇಶದ ಶ್ರೇಷ್ಠ ವ್ಯಕ್ತಿಗಳ ಕನಸು ಮತ್ತು ಸಂವಿಧಾನದ ನಿಯಮಗಳ ಅನುಸಾರ ದೇಶದ ಪ್ರತಿ ವರ್ಗಕ್ಕೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.