Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
4:58 AM Friday 22-October 2021

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ : ಸೋಮವಾರಪೇಟೆಯಲ್ಲಿ ಪ್ರತಿಭಟನೆ

27/11/2020

ಮಡಿಕೇರಿ ನ. 27 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಮಿಕರು, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ವಿರೋಧಿ ಸರ್ಕಾರಗಳು ಅಧಿಕಾರದಲ್ಲಿ ಉಳಿಯಲು ಯೋಗ್ಯವಲ್ಲ ಎಂದು ದಿಕ್ಕಾರ ಕೂಗಿದ ಕಾರ್ಮಿಕರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ತಹಶೀಲ್ದಾರ್ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜೇಸೀ ವೇದಿಕೆ ಮುಂಭಾಗ ಪ್ರತಿಭಟನಾ ಸಭೆ ನಡೆಸಿ, ತಾಲ್ಲೂಕು ಕಚೇರಿಗೆ ಜಾಥ ಮೂಲಕ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾ.ಪಂ. ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಮಿಕ, ರೈತ, ಬಡ ಜನರ ವಿರೋಧಿಯಾಗಿ ಆಡಳಿತ ನಡೆಸುತ್ತಿದ್ದು, ದುಡಿಯುವ ವರ್ಗವನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿವೆ ಎಂದು ಆರೋಪಿಸಿದರು.
ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಗೋವಿಂದದಾಸ್ ಮಾತನಾಡಿ, ಈಗಾಗಲೇ ಕಾರ್ಮಿಕರಿಗೆ ಪೂರಕವಾಗಿದ್ದ 47 ಯೋಜನೆಗಳನ್ನು ತೆಗೆದುಹಾಕುವ ಮೂಲಕ ಕಾರ್ಮಿಕರ ಜೀವನದ ಮೇಲೆ ಬರೆ ಎಳೆದು, ಬಂಡವಾಳಶಾಹಿಗಳ ಬೊಕ್ಕಸವನ್ನು ತುಂಬಿಸುತ್ತಿದೆ. ಸರ್ಕಾರದ ಅಂಗವಾಗಿದ್ದ ವಿವಿಧ ಸಂಸ್ಥೆಗಳ ಖಾಸಗೀಕರಣವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಈಗಾಗಲೇ ಬ್ಯಾಂಕ್‍ಗಳ ವಿಲೀನದಿಂದಾಗಿ ಸಂಕಷ್ಟ ಎದುರಿಸುವಂತಾಗಿದ್ದು, ಮುಂದೊಂದು ದಿನ ಬ್ಯಾಂಕ್‍ಗಳನ್ನೂ ಖಾಸಗೀಕರಣ ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಇದರೊಂದಿಗೆ ಎಲ್‍ಐಸಿ, ರೈಲ್ವೇ, ವಿಮಾನ ನಿಲ್ದಾಣ, ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಲಾಗುತ್ತಿದ್ದು, ಕಾರ್ಮಿಕ ವರ್ಗ ಜೀವನ ಭದ್ರತೆಯನ್ನು ಕಳೆದುಕೊಳ್ಳುತ್ತಿದೆ. ಇದರೊಂದಿಗೆ ನಿರುದ್ಯೋಗ ಪ್ರಮಾಣವೂ ಅಧಿಕವಾಗುತ್ತಿದೆ. ಕಾರ್ಮಿಕ ವಿರೋಧಿ ಧೋರಣೆಗಳನ್ನು ಮುಂದುವರೆಸಿದರೆ ರಾಷ್ಟ್ರಾದ್ಯಂತ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಉಪ ಕಾರ್ಯದರ್ಶಿ ಜಮುನ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಾವೇರಿ, ಗ್ರಾ.ಪಂ. ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನವೀನ್, ಐಎನ್‍ಟಿಯುಸಿ ನಗರಾಧ್ಯಕ್ಷ ಗಣೇಶ್, ಎಸ್.ಸಿ. ಒಕ್ಕೂಟದ ಉಪಾಧ್ಯಕ್ಷ ಹೊನ್ನಪ್ಪ, ಸೂರಿಗಾಗಿ ಸಮಿತಿ ಅಧ್ಯಕ್ಷ ಅಣ್ಣಪ್ಪ, ಕಾರ್ಯದರ್ಶಿ ಸಿಂಧು, ಎಐಟಿಯುಸಿ ತಾಲ್ಲೂಕು ಕಾರ್ಯದರ್ಶಿ ಪಿ.ಟಿ. ಸುಂದರ ಹಾಗೂ ಮತ್ತಿತರ ಕಾರ್ಯಕರ್ತರು ಇದ್ದರು.