ಮುಖವಾಡ

27/11/2020

ಮನುಷ್ಯ ಹುಟ್ಟಿದ ಮೇಲೆ ನೂರಾರು ಸಮಸ್ಯೆಗಳು ಇರುತ್ತವೆ. ಆದರೆ ಪರಿಹಾರ ಅನ್ನೋದು ಇದ್ದೇ ಇರುತ್ತದೆ.

ಆ ದಿನ ನಾನು ನಿದ್ದೆಯಿಂದ ಎದ್ದು ಕಣ್ಣೊರೆಸಿ ಕೊಳ್ಳುತ್ತಿದ್ದೆ ಆ ಸಮಯಕ್ಕೆ ನನಗೊಂದು ಕರೆ ಬಂತು. ಆ ಧ್ವನಿ ಒಂದು ಹೆಣ್ಣಿನ ಹತಾಶೆಯ ಧ್ವನಿ ಆಗಿತ್ತು ಸಾರ್ ನನ್ನನ್ನು ಕ್ಷಮಿಸಿ ನಾನು ತಪ್ಪು ಮಾಡಿಬಿಟ್ಟೆ ಹೆಣ್ಣು ಪವಿತ್ರತೆಯ ಸಂಕೇತ ಮೃದು ಸ್ವಭಾವದವಳು ಸೌಂದರ್ಯ ವಂತೆ ಅಂತಲ್ಲ ಎಲ್ಲರೂ ಹೇಳಿಕೊಳ್ಳುತ್ತಾರೆ ಅದೆಲ್ಲ ಕೇವಲ ಮಾತಿನ ವರಸೆ ಅಷ್ಟೇ. ಹೆಣ್ಣು ರೂಪವತಿ ಆಗಿರುವುದೇ ಒಂದು ಶಾಪ ನಾನು ಮನಸ್ಸನ್ನು ಮುಳ್ಳಿನ ಮೇಲೆ ಹಾಸಿ ಬಿಟ್ಟೆ ಅದು ಅದು ಹರಿದು ಹೋಗಿದೆ ನೀವೇ ಹೇಳಿ ಒಡೆದ ಹಾಲು ಒಡೆದ ಮನಸು ಎರಡು ಕೂಡ ತೃಣಕ್ಕೆ ಸಮಾನ ಅಲ್ಲವೇ ನನ್ನದು ಹೆಣ್ಣು ಜನ್ಮ ಎನ್ನುವುದಕ್ಕೆ ನಾಚಿಕೆಯಾಗ್ತಿದೆ ಇತ್ತ ಬದುಕುವುದು ಸಾಯುವುದು ಎಲ್ಲವೂ ಆಯ್ಕೆಯಂತೆ ನನ್ನೇ ದುರಿದೆ ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಪರಿತಪಿಸುತ್ತಿದ್ದೇನೆ ಒಟ್ಟಿನಲ್ಲಿ ನಾಯಿ ಮುಟ್ಟಿದ ಮಡಕೆಯಂತೆ ನನ್ನ ಬಾಳಾಗಿದೆ ಎಂದಳು.

ಅವಳು ಒಂದೇ ಸಮನೆ ಆಡಿದ ಮಾತುಗಳು ನನಗೆ ಪ್ರಶ್ನೆಯನ್ನು ಹುಟ್ಟು ಹಾಕಿದ್ದವು ನಾನು ಸಾವದಾನದಿಂದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಅವಳಿಂದಲೇ ಕಾರಣವನ್ನು ಕೇಳಿದೇ ಸಾರ್ ನನ್ನ ಜೀವನದಲ್ಲಿ ಗಂಡು ಅನ್ನೋ ಸುಳಿ ಅಲೆಯಾಗಿ ಸುಂಟರಗಾಳಿಯಂತೆ ಬಂದು ನನ್ನನ್ನು ಸುತ್ತಿಕೊಂಡಿದೆ ನಾನು ಕೊರೋನ ಸಮಯದಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡುವಾಗ ನನಗೆ ಯೋಧರ ಬಗ್ಗೆ ಅಪಾರವಾದ ಪ್ರೀತಿ ಇತ್ತು. ನಾನು ಕೂಡ ನರ್ಸ್ ಆಗಿದ್ದರಿಂದ ಒಂದು ಆರ್ಟಿಕಲ್ ಬರೆದಿದ್ದೆ ಅದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅದನ್ನು ನೋಡಿದ ವಿಜಯ್ ಎಂಬಾತ ನನ್ನ ಮೇಲೆ ಮನಸ್ಸಾಗಿ ನನ್ನ ನಂಬರನ್ನು ಪಡೆದುಕೊಂಡು ನಿಮ್ಮ ಕೆಲಸಕ್ಕೆ ನನ್ನದೊಂದು ಸಲಾಂ ನೀವು ಸೈನಿಕರ ಮೇಲೆ ಇಟ್ಟಿರುವ ನಂಬಿಕೆ ನೋಡಿ ಖುಷಿಯಾಯಿತು ನಿಮ್ಮ ಅಂದ ಚೆಂದ ನೋಡಿದ ಮೇಲೆ ನಿಮಗೆ ಒಳ್ಳೆ ಹೃದಯ ವಿದೆ ನಿಮ್ಮ ಒಪ್ಪಿಗೆ ಇದ್ರೆ ನಾನು ನಿಮ್ಮ ಬಾಳ ಸಂಗಾತಿ ಆಗುತ್ತೇನೆ ಎಂದಿದ್ದ.

ಆ ಮಾತು ಸರಿಯಾಗೇ ಇದ್ರೂ ಒಂದು ಕ್ಷಣ ಗೊಂದಲ ಹುಟ್ಟು ಹಾಕಿತ್ತು. ಕಾರಣ ಈ ಮೊದಲು ಸಹ ದುರದೃಷ್ಟ ಅಜಿತ ನ ರೂಪದಲ್ಲಿ ಬಂದು ನಾನು ಮಂಕು ಕವಿದ ಬುದ್ದಿಗೆ ಬೆಲೆ ಕೊಡುವಂತೆ ಆಯ್ತು. ಹೆಣ್ಣಲ್ಲವೇ ಸೋತೆ ಅದು ಹೆಣ್ಣಿನ ದೌರ್ಬಲ್ಯ ಏನೋ ಗೊತ್ತಿಲ್ಲ ಅವನು ತೋರಿದ ಪ್ರೀತಿಯ ಬಣ್ಣದ ಮಾತುಗಳಿಗೆ ಮರುಳಾಗಿ ನಾನು ಮನಸೋತೆ.

ಆದರೆ ಮದುವೆ ವಿಷ್ಯ ಬಂದಾಗ ಜಾತಿ ಅಡ್ಡ ಬಂದು ಅವನಿಂದ ದೂರ ಆದೆ. ಅಲ್ಲೂ ವಿಧಿ ಆಟ ಆಡಿ ಬಿಟ್ಟಿತು. ಹೆಣ್ಣುಮಕ್ಕಳು ಅಬಲೆಯರು ಅನ್ನೋದು ಮತ್ತೆ ಪ್ರೂ ಆಯ್ತು. ಸಾಯೋಣ ಅಂದುಕೊಂಡೆ ಆದ್ರೆ ಪಾಪಿ ಸಮುದ್ರಕ್ಕೆ ಹೋದ್ರು ಮೊಣಕಾಲುದ್ದ ನೀರು ಅನ್ನೋ ತರ ಮನೆಯವರ ಮುಖ ನೋಡಿ ಬದುಕಿದೇ. ಹೇಗೋ ಮುಗಿತು ಅಂದುಕೊಳ್ಳುವಷ್ಟರಲ್ಲಿ ಬೆನ್ನತ್ತಿದ ಬೇತಾಳನಂತೆ ಅನಿಲ್ ಬಂದಿದ್ದ ಅವನು ಪದೇ ಪದೇ ನನ್ನ ಹಿಂದೆ ಬಿದ್ದು ನೀನೇ ಬೇಕು ಅಂದು ಹಿಂದೆ ಬಿದ್ದ ಮೊದ್ಲೇ ಮೋಸದ ಬಲೆಗೆ ಬಿದ್ದು ಜೀವನ ನಾಶ ಮಾಡಿಕೊಂಡು ಸಹವಾಸ ಬೇಡವೆಂದು ಸುಮ್ಮನಿದ್ದೆ ಆದರೂ ವಿಧಿ ಬಿಡಲಿಲ್ಲ ನಾನು ಮತ್ತೆ ಗಂಡಿನ ಪೊಳ್ಳು ಮಾತಿಗೆ ಮರುಳಾಗಿ ಮನಸೋತೆ. ಆದರೆ ನನ್ನನ್ನು ಅರ್ಥ ಮಾಡಿಕೊಳ್ಳದವ ನನ್ನಿಂದ ದೂರಾದ. ಈಗ ನನಗೆ ನನ್ ಮೇಲೇನೆ ಕೋಪ ಬರ್ತಿದೆ ನಾನು ಗೊತಿದ್ದು ತಪ್ಪು ಮಾಡಿ ಮೋಸ ಹೋದೆ ಈಗ ನನಗೆ ಬೇರೆ ದಾರಿ ಕಾಣುತಿಲ್ಲ ಸಾವೇ ಗತಿ ಎಂದು ಅತ್ತಳು.

ಆ ಹೆಣ್ಣಿನ ಮಾತು ಕೇಳಿ ಮನಸ್ಸಿಗೆ ನೋವಾಯಿತು. ಆಕೆಯನ್ನು ಸಮಧಾನ ಮಾಡುವ ಉದ್ದೇಶದಿಂದ ತಪ್ಪು ನಡೆದಿದೆ ಎರಡು ಕೈ ಸೇರಿದ್ರೆ ಚಪ್ಪಾಳೆ.. ಎಲ್ಲವನ್ನು ಮರೆತು ಸಮ್ಮನ್ನಿದ್ದುಬಿಡು ಅಂದು ಬಿಟ್ಟೆ.. ಕೋಪಗೊಂಡ ಆಕೆ ನೀವು ಅದೇ ಎಲ್ಲರ ತರ ಅಂದಳು ನಾನು ಯೋಚಿಸಿ ನಿನ್ನ ನಿರ್ಧಾರ ಏನೆಂದು ಕೇಳಿದಕ್ಕೆ .. ಅನಿಲ್ ಬೇರೆ ಹೆಣ್ಣಿನ ಸಹವಾಸ ಮಾಡಿದ್ದು, ನನಗಾದ ಅನ್ಯಾಯ ಬೆರೋಂದು ಹೆಣ್ಣಿಗೆ ಆಗಬಾರದು .. ಗಂಡಿನ  ಕ್ರೌರ್ಯಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧರಿಸದಳು.. ನನಗೆ ಆಕೆಯ ಮಾತುಗಳನ್ನು ಕೇಳಿ ಗೌರವ ಹೆಚ್ಚಾಯ್ತು. ಅವಳ ಮೇಲೆ ಅನುಕಂಪ ಮೂಡಿತು.

ಎಲ್ಲಾ ಕಾಲದ ಮಹಿಮೆ ಅಂದುಕೊಂಡೆ. ಆಕೆಗೆ ಹೆಣ್ಣುಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವ ಗಂಡಿನ ಮುಖವಾಡ ಕಳಚಿ ಬಿಡು ಎಂದು ಸಲಹೆ ನೀಡಿದೆ.. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಅನ್ನೋದು ಅರಿವಾಗಿತು ಫೋನ್ ಕಟ್ಟಾಗಿ ಗಡಿಯಾರ ನೋಡಿದೆ ಮಧ್ಯಾಹ್ನ ಸಮಯ ವಾಗಿದೆ ಸಮಯ… ಹೆಣ್ಣುಮಕ್ಕಳು ಮನೇಲಿದ್ರೆ ಸೆರಗಿನಲಿ ಕೆಂಡ ಸುತು ಕೊಂಡಂತೆ ಅನ್ನೋದು ಅರಿವಾಯಿತು. ಪ್ರೀತಿ ಹೆಸರಿನಲ್ಲಿ ಬಂದಿದ್ದ ಗಂಡಿನ ಮುಖವಾಡ ವಿಪರ್ಯಾಸ ವೇ ಸರಿ ಎನ್ನುತ್ತಾ ಕೆಲಸದ ಕಡೆಗೆ ಮುಖ ಮಾಡಿದೆ….

ರಚನೆ : ಎ.ಟಿ. ಮಂಜುನಾಥ ಬಾಳೆಲೆ