ನೆಲ್ಯಹುದಿಕೇರಿಯಲ್ಲಿ ಸಿಪಿಐ ಎಂ ಕಮ್ಯೂನಿಸ್ಟ್ ಚಳುವಳಿಯ 100ರ ವರ್ಷಾಚರಣೆ

27/11/2020

ಮಡಿಕೇರಿ ನ. 27 : ಹಿಂದಿನಿಂದಲೂ ಸಂಕಷ್ಟದ ಜೀವನ ನಡೆಸುತ್ತಿರುವ ದುಡಿಯುವ ವರ್ಗದ ಪರವಾಗಿ ಸಿಪಿಐಎಂ ಪಕ್ಷ ಸಮಾನತೆಯ ಮೂಲಕ ಕಾರ್ಮಿಕರ ಹಿತ ಕಾಪಾಡುವಲ್ಲಿ ಶ್ರಮಿಸಿದೆ ಎಂದು ಸಿಪಿಐಎಂ ಮುಖಂಡ ಹಾಗೂ ಹೋರಾಟಗಾರ ಮಂಡ್ಯ ಕೃಷ್ಣೇಗೌಡ ಅಭಿಪ್ರಾಯಿಸಿದ್ದಾರೆ.
ನೆಲ್ಯಹುದಿಕೇರಿಯ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆದ ಸಿಪಿಐಎಂ ಭಾರತ ಮಾಕ್ರ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಚಳುವಳಿಯ 100ರ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಈ ದೇಶದಲ್ಲಿ ದುಡಿಯುವ ವರ್ಗದ ಹಲವಾರು ಕುಟುಂಬಗಳು ಬದುಕಿನ ಹಕ್ಕಿಗಾಗಿ ಹೋರಾಟ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರಕಾರಗಳು ಮೌನವಾಗಿದೆ. ನಿರುದ್ಯೋಗ ತಾಂಡವಾಡುತ್ತಿದ್ದು ಹೊಟ್ಟೆಪಾಡಿನ ಜೀವನಕ್ಕೆ ಸಂಕಷ್ಟ ಎದುರಿಸು ವಂತಹ ಪರಿಸ್ಥಿತಿ ದೇಶದಲ್ಲೆ ನಿರ್ಮಾಣವಾಗಿದೆ. ಕಾಪೆರ್Çರೇಟ್ ಕಂಪೆನಿಗಳ ಜೊತೆಗೆ ಕೈಜೋಡಿಸಿರುವ ಕೇಂದ್ರ ಸರ್ಕಾರ ಸಾಮಾನ್ಯ ಜನರ ಉದ್ಯೋಗಕ್ಕೆ ಕತ್ತರಿ ಹಾಕಿದೆ. ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಒಂದಾಗಿ ಬೃಹತ್ ಮುಷ್ಕರ ಮಾಡಲಿದ್ದಾರೆ. ಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರುವ ತನಕ ನಾವೆಲ್ಲರೂ ಒಂದಾಗಿ ಹೋರಾಟದ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಮುಂದಾಗಬೇಕಾಗಿದೆ ಎಂದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ದುರ್ಗಾಪ್ರಸಾದ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಕಾರ್ಮಿಕರ ಹಿತ ಕಾಪಾಡುವಲ್ಲಿ ಸಿಪಿಐಎಂ ಪಕ್ಷ ಮುಂದಾಗಿದ್ದು ಕಾರ್ಮಿಕರ ಪ್ರಭುತ್ವ ಸ್ಥಾಪನೆಗಾಗಿ ನಿರಂತರ ಹೋರಾಟಗಳನ್ನು ಮಾಡುತ್ತಿದೆ. ಜಿಲ್ಲೆಯಲ್ಲಿ ಕಾರ್ಮಿಕರು, ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಮೌನವಾಗಿದ್ದು, ಕಾರ್ಮಿಕ ಜನವಿರೋಧಿ ನೀತಿ ಅನುಸರಿಸುತ್ತಿರುವ ಸರಕಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಗಳನ್ನು ಮಾಡಲಾಗುತ್ತಿತ್ತು ರೈತರು ಕಾರ್ಮಿಕರು ನ್ಯಾಯಯುತ ಬೇಡಿಕೆಗೆ ಮುಷ್ಕರದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಪಿ. ಆರ್ ಭರತ್ ಮಾತನಾಡಿ ಬಿಜೆಪಿ ನೇತೃತ್ವದ ಸರಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿರುವ ಸರ್ಕಾರದ ನಡೆ ಖಂಡನೀಯ ಎಂದರು.
ನಿರಂತರ ಬೆಲೆ ಏರಿಕೆ ಯಿಂದ ಜನರು ತತ್ತರಿಸಿದ್ದಾರೆ. ಸಾಮಾನ್ಯ ಜನರಿಗೆ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಕಾಪೆರ್Çೀರೇಟ್ ಕಂಪೆನಿಗಳ ಪರವಾಗಿ ನಿಂತು ಖಾಸಗೀಕರಣ ಮಾಡುವ ಮೂಲಕ ಉದ್ಯೋಗಿಗಳಿಗೆ ದ್ರೋಹವೆಸಗಿ ಮತ್ತಷ್ಟು ನಿರುದ್ಯೋಗ ವಾಗಲು ಕಾರಣವಾಗಿದೆ.
ರೈತರು, ಕಾರ್ಮಿಕ ದುಡಿಯುವ ವರ್ಗವನ್ನು ಕಡೆಗಣಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ರೈತರು ತಾವು ಬೆಳೆದ ಫಸಲುಗಳಿಗೆ ಬೆಂಬಲ ಬೆಲೆ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ.ಪ್ರವಾಹ. ಪ್ರಕೃತಿ ವಿಕೋಪದಿಂದ ಅತ್ಯಂತ ಸಮಸ್ಯೆಗೆ ರೈತರನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸಲಾಗಿದೆ.
ಕಾಡುಪ್ರಾಣಿಗಳ ಭಯದ ನಡುವೆ ಜೀವನ ನಡೆಸುತ್ತಿರುವ ರೈತರು ಹಾಗೂ ಕಾರ್ಮಿಕ ಕುಟುಂಬಗಳಿಗೆ ಇಂದಿಗೂ ಮುಕ್ತಿ ಕಾಣದಂತಾಗಿದೆ.
ಜನರ ಹಿತ ಕಾಪಾಡಬೇಕಾದ ಜನಪ್ರತಿನಿಧಿಗಳು ಮೌನವಾಗಿದ್ದು ಇಂಥವರ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಕಳೆದ ಹಲವು ವರ್ಷಗಳಿಂದಲೂ ಸಿಪಿಐಎಂ ಪಕ್ಷ ದೊಂದಿಗೆ ತಮ್ಮ ಸೇವೆ ಸಲ್ಲಿಸಿರುವ ಹಿರಿಯರಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು.
ನೆಲ್ಲಿಹುದಿಕೇರಿ ಗ್ರಾಮ ಸಮಿತಿ ಕಾರ್ಯದರ್ಶಿ ಜೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಎನ್. ಡಿ ಕುಟ್ಟಪ್ಪ, ಮೋನಪ್ಪ, ರವಿ, ಗಣೇಶ್, ಚಿನ್ನಪ್ಪ, ಅಲ್ಫೋನ್ಸ್,ಚಂದ್ರ ,ನಾರಾಯಣ, ಕುನ್ನಿ ರಾಮನ್ ಸೇರಿದಂತೆ ನೂರಾರು ಸಂಘಟನೆಯ ಪ್ರಮುಖರು ಹಾಜರಿದ್ದರು.