ಶ್ರೀಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಕಛೇರಿ ಸ್ಥಳಾಂತರ

27/11/2020

ಮಡಿಕೇರಿ ನ.27 : ಭಾಗಮಂಡಲದ ಶ್ರೀಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಚೇರಂಬಾಣೆ ಶಾಖೆಯ ಕಛೇರಿಯನ್ನು ಗ್ರಾಮದ ಅಂಚೆ ಕಛೇರಿ ಮುಂಭಾಗದಲ್ಲಿರುವ ಕೂಡಕಂಡಿ ರಾಘವಯ್ಯನವರ ವಾಣಿಜ್ಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ಕೋಡಿ ಕೆ.ಪೊನ್ನಪ್ಪರವರು ಜ್ಯೋತಿ ಬೆಳಗುವುದರೊಂದಿಗೆ ಶಾಖೆಯನ್ನು ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಎಂ.ಕಿಶೋರ್, ನಿರ್ದೇಶಕರುಗಳಾದ ಪಿ.ಸಿ.ವಿಠಲ, ಬಿ.ಬಿ. ತಮ್ಮಯ್ಯ , ಡಿ.ಎನ್.ಹರ್ಷ, ಸಂಸ್ಥೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿನ್ನಿ ಡಿ.ಎಸ್. ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.